ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ ಆರ್ ಫಾರ್ಮ್‌ಹೌಸ್‌ನಲ್ಲಿ ಬರ್ತ್‌ಡೇ ಪಾರ್ಟಿ ಹೆಸರಿನಲ್ಲಿ ರೇವ್ ಪಾರ್ಟಿ ಆಯೋಜನೆ ಆಗಿತ್ತು. ಪಾರ್ಟಿಯಲ್ಲಿ ತೆಲುಗು ನಟ-ನಟಿಯರು ಹಲವು ಗಣ್ಯವ್ಯಕ್ತಿಗಳು ಹಾಗೂ ಪ್ರಭಾವಿ ವ್ಯಕ್ತಿಗಳು ಭಾಗಿ ಆಗಿದ್ದರು, ವಿಷಯ ತಿಳಿದ ಸಿಸಿಬಿ ಪೊಲೀಸರು ತಡರಾತ್ರಿ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದಾರೆ ಈ ವೇಳೆ ಅಲ್ಲಿ ಡ್ರಗ್ಸ್ , ಎಂಡಿಎಂಎ ಮಾತ್ರೆಗಳು ಹಾಗೂ ಕೊಕೇನ್ ಸಿಕ್ಕಿರುವುದಾಗಿ ಹೇಳಲಾಗುತ್ತಿದೆ ಈ ಪಾರ್ಟಿಗೆ ಬೆಂಗಳೂರು, ತೆಲಂಗಾಣ ಮೂಲಕ ಹಲವರು ಹಾಜರಾಗಿದ್ದರು. ಕಾರ್‌ವೊಂದರಲ್ಲಿ ಆಂಧ್ರ ಶಾಸಕ ಕಾಕನಿ ಗೋವರ್ಧನ ರೆಡ್ಡಿ ಹೆಸರಿನ ಪಾಸ್ ಕೂಡ ಪತ್ತೆ ಆಗಿದೆ.
ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಒಳಗಿದ್ದವರು ಫಾರ್ಮ್ ಹೌಸ್ ಬಾಗಿಲು ಬಂದ್ ಮಾಡಿಕೊಂಡಿದ್ದರು ಮಾದಕ ವಸ್ತುಗಳನ್ನು ನಾಶ ಪಡಿಸುವ ಪ್ರಯತ್ನ ಮಾಡಿದ್ದರು ಬಳಿಕ ಪೊಲೀಸರು ಬಲವಂತವಾಗಿ ಬಾಗಿಲು ತೆಗೆಸಿ ಒಳಗೆ ಹೋಗಿ 30 ಜನ ಯುವತಿಯರು 71 ಮಂದಿ ಯುವಕರು, ಸೇರಿ 101 ಜನರನ್ನು ವಶಕ್ಕೆ ಪಡೆದು ಅಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಪಾರ್ಟಿಯಲ್ಲಿ ತೆಲುಗು ಪೋಷಕ ನಟಿ ಹೇಮಾ ಭಾಗಿ ಆಗಿದ್ದರು ಎನ್ನಲಾಗಿತ್ತು. ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ ಆದರೆ ಆಕೆ ತಾನು ಹೈದರಾಬಾದ್‌ನಲ್ಲೇ ಇರುವುದಾಗಿ ತೆಲುಗು ಮಾಧ್ಯಮಗಳಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಕೂಡ ಹಲವು ಕಡೆಗಳಲ್ಲಿ ರೇವ್ ಪಾರ್ಟಿಗಳು ನಡೆದಿವೆ ನಗರದ ಒಳಭಾಗದಲ್ಲಿ ಇಂತಹ ಪಾರ್ಟಿಗಳನ್ನು ನಡೆಸುವುದು ಕಷ್ಟ ಎಂದು ಇದೀಗ ಹೊರಭಾಗದಲ್ಲಿ ಇಂತಹ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ ಸನ್‌ಸೆಟ್ ಸನ್‌ರೈಟ್ ಹೆಸರಿನಲ್ಲಿ ಈ ಪಾರ್ಟಿಯನ್ನು ಏರ್ಪಡಿಸಲಾಗಿತ್ತು. ಅಂದರೆ ಭಾನುವಾರ ಸಂಜೆ ಸೂರ್ಯ ಮುಳುಗಿದ ಬಳಿಕ ಶುರುವಾದ ಪಾರ್ಟಿ ಸೋಮವಾರ ಬೆಳಗ್ಗೆ ಸೂರ್ಯ ಹುಟ್ಟುವ ತನಕ ಸತತವಾಗಿ ನಡೆದಿರುವ ಪಾರ್ಟಿ ಇದಾಗಿತ್ತು. ಸದ್ಯ ಪಾರ್ಟಿ ಆಯೋಜಕ ವಾಸು ಸೇರಿದಂತೆ 5 ಜನರನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪಾರ್ಟಿಯಲ್ಲಿದ್ದ ಮೂವರು ಡ್ರಗ್ ಪೆಡ್ಲರ್ಸ್ ಕೂಡ ಪೊಲೀಸರ ವಶದಲ್ಲಿದ್ದಾರೆ. FSL ತಂಡ ಪಾರ್ಟಿ ನಡೆದ ಜಾಗದಲ್ಲಿ ಪರಿಶೀಲನೆ ನಡೆಸುತ್ತಿದೆ ಮಾದಕ ವಸ್ತುಗಳು ಸೇರಿದಂತೆ ಪಾರ್ಟಿಯ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
Post a comment
Log in to write reviews