Samayanews.

Samayanews.

2024-11-15 07:31:59

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

LPG ಸಿಲಿಂಡರ್ ಬೆಲೆಯಲ್ಲಿ‌ ಇಳಿಕೆ

ನವದೆಹಲಿ : ದೇಶಾದ್ಯಂತ ಇಂದು ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಕಂಡಿದೆ. ತೈಲ ಮಾರುಕಟ್ಟೆ ಕಂಪನಿಗಳು, 19 ಕಿಲೋಗ್ರಾಂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯನ್ನು ಘೋಷಿಸಿವೆ. 69.50ರಷ್ಟು ಪರಿಷ್ಕೃತ ದರಗಳು ತಕ್ಷಣದಿಂದ ಜಾರಿಗೆ ಬರುವಂತೆ ತಿಳಿಸಿದೆ. ಇಂದಿನಿಂದ ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 1,676 ರೂ. 
ಒಂದು ತಿಂಗಳ ಹಿಂದೆ, ಮೇ 1 ರಂದು, ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 19 ರೂ.ಗೆ ಇಳಿಸಿತ್ತು. ಅಂದರೆ 19 ಕೆಜಿಯ ವಾಣಿಜ್ಯ LPG ಸಿಲಿಂಡರ್‌ನ ಆಗ ದೆಹಲಿಯಲ್ಲಿ 1745.50 ರೂ. ಈ ಹಿಂದೆ ಏಪ್ರಿಲ್‌ನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್‌ಗೆ 30.50 ರೂಪಾಯಿ ಕಡಿತಗೊಳಿಸಿ 1764.50 ರೂ. ಆಗಿತ್ತು. ತಿಂಗಳ ಆರಂಭದಲ್ಲಿ ಅದನ್ನು ಸರಿ ಹೊಂದಿಸಲು ಮತ್ತೆ ಇಳಿಕೆ ಮಾಡಿದೆ. ಅಡುಗೆ ಮಾಡಲು ಎಲ್‌ಪಿಜಿ ಸಿಲಿಂಡರ್‌ಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಅರ್ಹ ಕುಟುಂಬಗಳಿಗೆ ಸಹಾಯಧನವನ್ನು ನೀಡುವ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ಬೆಲೆ ಕಡಿತಕ್ಕೆ ಕಾರಣಗಳು

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್‌ಡಿಎ ಸರ್ಕಾರ ಇಂಧನ ಬೆಲೆಗಳನ್ನು ನಿಯಂತ್ರಿಸಲು ವಿಫಲವಾಗಿದೆ ಮತ್ತು ಅಗತ್ಯ ಆಹಾರ ಪದಾರ್ಥಗಳು ಮತ್ತು ಇತರ ಸರಕುಗಳ ಬೆಲೆಗಳ ಬೆಲೆಯನ್ನು ಹೆಚ್ಚಿಸಿದೆ ಎಂದು ಇಂಡಿಯಾ ಒಕ್ಕೂಟ ಪದೇ ಪದೇ ಟೀಕಿಸುತ್ತಿದೆ. ಬೆಲೆ ಇಳಿಕೆಗೆ ನಿಖರವಾದ ಕಾರಣಗಳನ್ನು ಬಹಿರಂಗಪಡಿಸದಿದ್ದರೂ, ಅಂತರರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಏರಿಳಿತಗಳು, ತೆರಿಗೆ ನೀತಿಗಳಲ್ಲಿನ ಬದಲಾವಣೆಗಳು ಮತ್ತು ಪೂರೈಕೆ,ಬೇಡಿಕೆಯಂತಹ ಅಂಶಗಳಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ವಾಣಿಜ್ಯ ಮತ್ತು ದೇಶೀಯ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಿಲಿಂಡರ್‌ಗಳ ಪರಿಷ್ಕರಣೆಗಳು ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನದಂದು ಈ ಪ್ರಕ್ರಿಯೆ ನಡೆಯುತ್ತದೆ.

img
Author

Post a comment

No Reviews