ಮೈಸೂರು : ಪುರಾತತ್ವ ಇಲಾಖೆ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮತ್ತು ಪರಂಪರೆ ಸಮಿತಿಯು ಮೈಸೂರಿನ 129 ಪಾರಂಪರಿಕ ಕಟ್ಟಡ ರಚನೆಗಳ ಸಮೀಕ್ಷೆಯನ್ನು ಮಾಡಿದೆ. ಇದರಲ್ಲಿ 11ಪಾರಂಪರಿಕ ಕಟ್ಟಡಗಳನ್ನು ಕೂಡಲೇ ಮರುಸ್ಥಾಪಿಸಬೇಕೆಂದು ಶಿಫಾರಸು ಮಾಡಿದೆ.
ಇವರ ಶಿಫಾರಸಿನಂತೆ ರಾಜ್ಯ ಸರ್ಕಾರವು, ಲ್ಯಾನ್ಸ್‌ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ, ಮಹಾರಾಣಿ ಕಾಲೇಜು ಮತ್ತು ಹಾಸ್ಟೆಲ್ ಕಟ್ಟಡಗಳ ನೆಲಸಮ ಮಾಡಲು ನಿರ್ಧರಿಸಿದೆ. ತಜ್ಞರ ಸಮಿತಿಯು 11 ಪಾರಂಪರಿಕ,ಕಟ್ಟಡಗಳ ಜೀರ್ಣೋದ್ಧಾರಕ್ಕಾಗಿ ಸುಮಾರು 96,80,59,838 ರೂಗಳಷ್ಟು ಅಂದಾಜು ವೆಚ್ಚ ತಗುಲಬಹುದು ಎಂದು ಹೇಳಿದೆ. ಪಾರಂಪರಿಕ ಸಮಿತಿ ಸದಸ್ಯ ಹಾಗೂ ತಜ್ಞ ಪ್ರೊ.ರಂಗರಾಜು ಅವರು ಪಾರಂಪರಿಕ ಕಟ್ಟಡಗಳ ಸ್ಥಿತಿಗತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿ ವರದಿಯ ಪ್ರತಿಗಳನ್ನ ನೀಡಿದ್ದಾರೆ.
ವರದಿಯನ್ನ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ ಅವರು, ಮಂಡಿಮೊಹಲ್ಲಾದ ವಾಣಿ ವಿಲಾಸ ಮಾರುಕಟ್ಟೆ ಮತ್ತು ಚಿಕ್ಕ ಮಾರುಕಟ್ಟೆಯ ಸ್ಥಿತಿಗತಿ ಕುರಿತು ಪ್ರಶ್ನಿಸಿದರು. ಮತ್ತು ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ, ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ಹಾಸ್ಟೆಲ್ ಅನ್ನು ನೆಲಸಮಗೊಳಿಸಲು ಸರ್ಕಾರ ಬದ್ಧವಾಗಿದೆ ಮತ್ತು ಈ ಆರ್ಥಿಕ ವರ್ಷದಲ್ಲಿಯೇ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
Post a comment
Log in to write reviews