ಮಂಡ್ಯ: ಮಾಜಿ ಸಚಿವ ಎಚ್.ಡಿ.ರೇವಣ್ಣ ಕುಟುಂಬ ಲೈಂಗಿಕ ಕಿರುಕುಳ, ಅಪಹರಣ ಆರೋಪ ಎದುರಿಸುತ್ತಿರುವ ಹಿನ್ನೆಲೆ ಮಂಡ್ಯ ನಗರದಲ್ಲಿ ದಳಪತಿಗಳು ಜೆಡಿಎಸ್ ಫ್ಲೆಕ್ಸ್‌ಗಳಿಂದ ರೇವಣ್ಣ ಫೋಟೊ ತಗೆದು ಹಾಕಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಮಂಡ್ಯನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿದೆ. ಫ್ಲೆಕ್ಸ್‌ಗಳಲ್ಲಿ ಜೆಡಿಎಸ್ ಮುಖಂಡರು, ಬಿಜೆಪಿ ನಾಯಕರಾದ ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್, ಮಾಜಿ ಸಂಸದೆ ಸುಮಲತಾ, ಮಾಜಿ ಸಚಿವ ಹೆಚ್.ವಿಶ್ವನಾಥ್ ಸೇರಿದಂತೆ ಹಲವರ ಫೋಟೊಗಳಿವೆ. ಆದರೆ ಎಚ್.ಡಿ.ರೇವಣ್ಣ ಫೋಟೊ ಕೈಬಿಟ್ಟಿದ್ದಾರೆ.
ಅಶ್ಲೀಲ ವಿಡಿಯೋ, ಅಸಹಜ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪ್ರಜ್ವಲ್ ರೆವಣ್ಣ, ಸೂರಜ್ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅದೇ ರೀತಿ ಅಪಹರಣ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಎಚ್.ಡಿ.ರೇವಣ್ಣ, ಜಾಮೀನು ಪಡೆದಿರುವ ಪತ್ನಿ ಭವಾನಿ ರೇವಣ್ಣ ಇವೆಲ್ಲ ಘಟನೆಗಳಿಂದ ಎಚ್.ಡಿ ದೇವೇಗೌಡರ ಕುಟುಂಬಕ್ಕೆ ಮತ್ತು ಜೆಡಿಎಸ್ ಪಕ್ಷಕ್ಕೆ ದೊಡ್ಡ ಮಟ್ಟದ ಕಳಂಕ ತಂದಿವೆ. ಹಾಗಾಗಿ ಈ ಮುಜುಗರ ತಪ್ಪಿಸಲು ಮಂಡ್ಯನಗರದಲ್ಲಿ ದಳಪತಿಗಳು ಜೆಡಿಎಸ್ ಫ್ಲೆಕ್ಸ್‌ಗಳಿಂದ ರೇವಣ್ಣ ಫೋಟೊ ಕಿಕ್ ಔಟ್ ಮಾಡಿದ್ದಾರೆ.
Post a comment
Log in to write reviews