ಅಪಹರಣ ಪ್ರಕರಣದ ಆರೋಪದಲ್ಲಿ ಎಸ್ ಐ ಟಿ ತನಿಖೆ ಗೆ ಒಳಗಾಗಿದ್ದ ರೇವಣ್ಣಗೆ ಕೋರ್ಟ್ ಮೇ 14 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇಂದು ಎಸ್ ಐ ಟಿ ತಂಡ ಮಾಜಿ ಸಚಿವ ರೇವಣ್ಣರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿತ್ತು. ನಂತರ ವಿಚಾರಣೆ ನಡೆಸಿ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಕೋರ್ಟ್ ತೀರ್ಪಿನ ನಂತರ ರೇವಣ್ಣ ಕಣ್ಣೀರು ಸುರಿಸುತ್ತಾ ಕೋರ್ಟ್ ಹಾಲ್ ನಿಂದ ಹೊರಬಂದಿದ್ದಾರೆ. ಆ ವೇಳೆ ರೇವಣ್ಣರನ್ನು ನೋಡಲು ಮಹಿಳಾ ಸಿಬ್ಬಂದಿಗಳು ಕಿಕ್ಕಿರಿದು ನಿಂತಿದ್ದರು. ಇನ್ನೂ ಕೆಲವೇ ಕ್ಷಣಗಳಲ್ಲಿ ರೇವಣ್ಣರನ್ನು ಎಸ್ ಐ ಟಿ ಅಧಿಕಾರಿಗಳು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಿದ್ದಾರೆ.
Post a comment
Log in to write reviews