ಯಾದಗಿರಿ: ಜನರು ಪಡಿತ ಚೀಟಿ ಹಿಡಿದು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯಲು ಪರದಾಟ. ಕಳೆದ ಒಂದು ವಾರದಿಂದ ಸರ್ವರ್ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರ ಬೆರಳಚ್ಚನ್ನು ವೆಬ್‌ಸೈಟ್ ಸ್ವೀಕರಿಸುತ್ತಿಲ್ಲ. ಜನರು ಅಕ್ಕಿ ಪಡೆಯಲು ಯಾದಗಿರಿ ಜಿಲ್ಲೆಯ ಸ್ಟೇಷನ್ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪರದಾಡುತ್ತಿದ್ದಾರೆ.
ಜುಲೈ ತಿಂಗಳಿನಿಂದ ಐದು ಕೆಜಿ ಅಕ್ಕಿಯ ಬದಲು ಹಣ ಪಡೆಯಬಹುದು ಎಂಬುವುದಕ್ಕೂ ಕತ್ತರಿ ಬಿದ್ದಿದೆ. ಒಂದು ಕಡೆ ಅಕ್ಕಿಯೂ ಇಲ್ಲ. ಇನ್ನೊಂಡು ಕಡೆ ಹಣವೂ ಇಲ್ಲ ಎನ್ನುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಿಗದ ಕಾರಣಕ್ಕೆ ಜನರು ತಮ್ಮ ಕೂಲಿ ಕೆಲಸ ಬಿಟ್ಟು ಪಡಿತರ ಧಾನ್ಯ ಪಡೆಯಲು ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಜನರು ಬರುತ್ತಿದ್ದಾರೆ. ಆದರೆ ಅಲ್ಲಿಯೂ ಜನರಿಗೆ ಅಕ್ಕಿ ಸಿಗುತ್ತಿಲ್ಲ. ಸರ್ವರ್ ಸಮಸ್ಯೆಯಿಂದ ಜನರು ಊಟಕ್ಕೆ ಅಕ್ಕಿ ಇಲ್ಲದೇ ಪರದಾಡುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದು ತಪ್ಪು ಮಾಡಿದ್ದೇವೆ. ಸಿದ್ದರಾಮಯ್ಯರನ್ನು ನಂಬಿ ನಾವು ಅಧಿಕಾರಕ್ಕೆ ತಂದಿದ್ದೇವೆ. ಅದರೆ ಕಾಂಗ್ರೆಸ್ ಸರ್ಕಾರ ಅಕ್ಕಿಯ ಒಂದು ರೂಪಾಯಿ ಹಣವನ್ನು ಪಾವತಿ ಮಾಡಿಲ್ಲ. ಒಂದು ಕಡೆ ರೇಷನ್ ಹಣವೂ ಇಲ್ಲ ಮತ್ತೊಂದೆಡೆ ಊಟ ಮಾಡಲು ಮನೆಯಲ್ಲಿ ಅಕ್ಕಿಯೂ ಇಲ್ಲ. ಈಗ ಅಕ್ಕಿ ಇಲ್ಲದೇ ನಾವು ಹೇಗೆ ಊಟ ಮಾಡಬೇಕು. ಬೇರೆಯವರಿಂದ ಅಕ್ಕಿ ಸಾಲ ಪಡೆದು ಊಟ ಮಾಡುವ ಪರಿಸ್ಥಿತಿ ಬಂದಿದೆ. ನಾವು ಬಡವರು ಹೇಗೆ ಬದುಕಬೇಕು. ಎಂದು ಆಕ್ರೋಶ ವ್ಯಕ್ತಪಡಿಸಿದ ಓರ್ವ ಗ್ರಾಹಕಿ.
Post a comment
Log in to write reviews