ಯುಟ್ಯೂಬ್ ಚಾನಲ್ ಆರಂಭವಾದ 90 ನಿಮಿಷದಲ್ಲೇ 1 ಮಿಲಿಯನ್ ಸಬ್ಸ್ಕ್ರೈಬರ್ ಪಡೆದ ರೊನಾಲ್ಡೊ
ಹೈದರಾಬಾದ್: ಪೋರ್ಚುಗಲ್ನ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯನೋ ರೊನಾಲ್ಡೊ ಬುಧವಾರ ತಮ್ಮದೇ ಆದ ಹೊಸ ಯುಟ್ಯೂಬ್ ಚಾನಲ್ವೊಂದನ್ನು ಆರಂಭಿಸಿದ್ದಾರೆ. ಆಗಸ್ಟ್ 21ರಂದು ಆರಂಭವಾದ ಈ ಯೂಟ್ಯೂಬ್ ಚಾನಲ್ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಚಾನಲ್ ಆರಂಭವಾದ 90 ನಿಮಿಷದಲ್ಲೇ 1 ಮಿಲಿಯನ್ ಸಬ್ಸ್ಕ್ರೈಬರ್ಗಳಾಗಿದ್ದಾರೆ. ಈ ಚಾನಲ್ ಮೂಲಕ ರೊನಾಲ್ಡೊ ಪುಟ್ಬಾಲ್ ಆತದ ತೆರೆ ಹಿಂದಿನ ಕಥೆಗಳು ಸೇರಿದಂತೆ ಅವರ ಜೀವನದ ಸ್ವಾರಸ್ಯಕರ ವಿಚಾರಗಳನ್ನು ಅಭಿಮಾನಿಗಳ ಎದುರು ಅನಾವರಣಗೊಳಿಸಲಿದ್ದಾರೆ.
ಇನ್ನು, ಚಾನಲ್ ಆರಂಭವಾಗಿ ದಿನ ಕಳೆಯುವುದರೊಳಗೆ 11.5 ಮಿಲಿಯನ್ ಸಬ್ಸ್ಕ್ರೈಬರ್ಗಳಾಗಿದ್ದಾರೆ. ಈ ಮೊದಲು ಫುಟ್ಬಾಲ್ ಸ್ಟಾರ್ ತಮ್ಮದೇ ಹೊಸ ಯುಟ್ಯೂಬ್ ಚಾನಲ್ವೊಂದನ್ನು ಶೀಘ್ರದಲ್ಲಿ ಪ್ರಾರಂಭಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ್ದರು. ಈ ಚಾನಲ್ ಬಗ್ಗೆ ಅಭಿಮಾನಿಗಳಲ್ಲೂ ಸಾಕಷ್ಟು ಕಾತುರ ವ್ಯಕ್ತವಾಗಿತ್ತು. ಇನ್ನು, ರೊನಾಲ್ಡೊಗೆ ಎಕ್ಸ್ನಲ್ಲಿ 112.6 ಮಿಲಿಯನ್ ಬೆಂಬಲಿಗರಿದ್ದರೆ, ಫೇಸ್ಬುಕ್ನಲ್ಲಿ 170 ಮಿಲಿಯನ್ ಮತ್ತು ಇನ್ಟ್ಸಗ್ರಾಂನಲ್ಲಿ 636 ಮಿಲಿಯನ್ ಬೆಂಬಲಿಗರಿದ್ದಾರೆ.
ಚಾನಲ್ ಬಿಡುಗಡೆಗೆ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಕ್ರಿಸ್ಟಿಯನೋ ರೊನಾಲ್ಡೊ. ನನ್ನ ಯುಟ್ಯೂಬ್ ಚಾನಲ್ ಅಂತಿಮವಾಗಿ ಹೊರಬಂದಿದೆ. ನನ್ನ ಹೊಸ ಪ್ರಯಾಣಕ್ಕೆ ಸೇರಲು ಚಂದಾದಾರರಾಗಿ ಎಂದು ತಿಳಿಸಿದ್ದರು. ಈ ಯುಟ್ಯೂಬ್ ಚಾನಲ್ಗೆ 'ಯುಆರ್ ಕ್ರಿಸ್ಟಿಯನೋ' ಎಂದು ಹೆಸರಿಡಲಾಗಿದೆ. 39 ವರ್ಷದ ಪೋರ್ಚುಗಲ್ ಮೂಲದ ಪುಟ್ಬಾಲ್ ತಾರೆಯ ಮೊದಲ ವಿಡಿಯೋವನ್ನು 13 ಗಂಟೆಗಳಲ್ಲಿ 7.95 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
Post a comment
Log in to write reviews