ವಿದ್ಯುತ್ ಸಂಪರ್ಕವೇ ಇಲ್ಲದ ಅಂಗನವಾಡಿಗಳಿಗೆ ಪ್ರತಿ ತಿಂಗಳು 2 ಸಾವಿರ ಬಿಲ್
ಮೈಸೂರು : ವಿದ್ಯುತ್ ಸಂಪರ್ಕವನ್ನೇ ಕಲ್ಪಿಸದ ಅಂಗನವಾಡಿಗಳಿಗೆ ಪ್ರತಿ ತಿಂಗಳು 2 ಸಾವಿರಕ್ಕೂ ಅಧಿಕ ಬಿಲ್ ಹಾಕಿರುವ ಘಟನೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ನಡೆದಿದೆ.
ಹ್ಯಾಂಡ್ ಪೋಸ್ಟ್ ನ ಯರಹಳ್ಳಿ, 1 ಮತ್ತು 2ನೇ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಇದ್ದರೂ ಪ್ರತಿ ಕೇಂದ್ರಕ್ಕೂ ತಲಾ 2 ಸಾವಿರ ಬಾಕಿ ಪಾವತಿ ಮಾಡಲು ಚೆಸ್ಕಾಂ ಒತ್ತಾಯ ಮಾಡುತ್ತಿದೆ. ಎರೆಡು ಅಂಗನವಾಡಿಗಳಿಗೆ ಒಂದೇ ಲೈಟ್ ಕಂಬದಿಂದ ಸಂಪರ್ಕ ಯೋಜನೆ ಕಲ್ಪಿಸಬೆಕಾಗಿತ್ತು,ಎರಡು ವರ್ಷಗಳ ಹಿಂದೆಯೇ ಈ ಯೋಜನೆ ಆರಂಭವಾಗಿತ್ತು ಆದರೆ ಇನ್ನು ಕೆಲಸ ಪೂರ್ಣಗೊಂಡಿರಲಿಲ್ಲ. ಕಾಮಗಾರಿ ಕೆಲಸ ಪೂರ್ಣಗೊಂಡಿಲ್ಲದ್ದಿದ್ದರು, ವಿದ್ಯುತ್ ಕಂಬದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸದೇ ಇದ್ದರೂ, ಮೀಟರ್ ಅಳವಡಿಸಲಾಗಿತ್ತು. ಅದರಂತೆ ಬಿಲ್ ನೀಡಲಾಗಿದ್ದು ಬಾಕಿ ನೀಡಬೇಕೆಂದು ಹೇಳಲಾಗುತ್ತಿದೆ.ಚೆಸ್ಕಾಂ ಮತ್ತು ಸಿಡಿಪಿಒ ಇಲಾಖೆಗಳ ಈ ಧೋರಣೆ ಇಂದ ಸರ್ಕಾರದ ಹಣ ವ್ಯಯವಾಗುತ್ತಿದೆ .ಈ ಇಲಾಖೆಗಳು ಮಾಡಿರುವ ಎಡವಟ್ಟನ್ನ ಯಾರು ಪಶ್ನೆ ಮಾಡದಂತಹ ಪರಿಸ್ಥಿತಿಯಾಗಿದೆ. ಹಾಗೆಯೇ ಹೆಚ್ ಡಿ ಕೋಟೆ ತಾಲೂಕಿನ ಇತರ ಅಂಗನವಾಡಿ ಕೇಂದ್ರಗಳಲ್ಲೂ ಇಂತಹದೇ ಸ್ಥಿತಿ ಇದೆ. ಪ್ರತಿ ತಿಂಗಳು ಸಾವಿರಾರು ರೂಪಾಯಿ ಬಾಕಿ ಪಾವತಿಸುವಂತೆ ಬಿಲ್ ನೀಡುತ್ತಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾತ್ರ ಪ್ರಶ್ನಿಸದೇ ಕಣ್ಣು ಮುಚ್ಚಿಕುಳಿತಂತಿದೆ ಈ ನಡೆ ಇಲಾಖೆಯ ಕೆಲವು ಅಧಿಕಾರಿಗಳ ಮೇಲೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಂತಿದೆ. ಈ ಕೂಡಲೆ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿದರೆ ಸರ್ಕಾರದ ಹಣ ವ್ಯಯವಾಗುವದನ್ನ ತಡೆಯಬಹುದು.
Post a comment
Log in to write reviews