ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಜಾರ್ಖಂಡ್ ರಾಜಧಾನಿ ರಾಂಚಿಯ ಅನೇಕ ಸ್ಥಳಗಳಲ್ಲಿ ಸೋಮವಾರ ಸರಣಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸುಮಾರು 25 ಕೋಟಿ ರೂ ಗಳಷ್ಟು ದಾಖಲೆಗಳಿಲ್ಲದ ನಗದು ಹಣವನ್ನು ಜಪ್ತಿ ಮಾಡಿದ್ದಾರೆ.
ಜಾರ್ಖಂಡ್ ಸಚಿವ ಅಲಂಗೀರ್ ಅಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆ ಸೇರಿದಂತೆ ಹಲವಾರು ಮನೆ ಮೇಲೆ ದಾಳಿ ನಡೆಸಲಾಗಿದೆ.
ಸಂಜೀವ್ ಲಾಲ್ ಅವರ ಮನೆಗೆಲಸದವನ ಬಳಿ ಅಂದಾಜು 20 ರಿಂದ 25 ಕೋಟಿ ರೂ ಮೊತ್ತದಷ್ಟು ಭಾರಿ ಮೊತ್ತದ ನಗದು ಪತ್ತೆಯಾಗಿದೆ.
70 ವರ್ಷದ ಕಾಂಗ್ರೆಸ್ ನಾಯಕ ಅಲಂಗೀರ್ ಅಲಂ ಅವರು ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಖಾತೆ ಸಚಿವರಾಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ನಡೆದ ಈ ದಾಳಿಯು ರಾಜಕೀಯ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ಪ್ರತಿಪಕ್ಷಗಳ ವಿರುದ್ದ ಬಿಜೆಪಿಗೆ ಇದು ಅಸ್ತ್ರವಾಗಿ ಪರಿಣಮಿಸಿದೆ.
ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲವು ಯೋಜನೆಗಳ ಅನುಷ್ಠಾನದ ವೇಳೆ ಅಕ್ರಮಗಳು ನಡೆದಿವೆ. ಈ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕುರಿತು ನಡೆಯುತ್ತಿರುವ ತನಿಖೆಗೆ ಪೂರಕವಾಗಿ ಈ ದಾಳಿಗಳು ನಡೆದಿವೆ.
Tags:
- domestic worker
- work from home
- domestic work
- domestic workers
- jharkhand ed raid
- ed raid in jharkhand
- ed raids in jharkhand
- jharkhand
- jharkhand home work test series
- jharkhand mining ed raids
- jharkhand news
- work from home jobs
- domestic worker (profession)
- jharkhand ed raids news today
- seema patra jharkhand
- ias tortures domestic help
- jharkhand minister alamgir alam
- seema patra bjp jharkhand
- jharkhand home guard latest news
- seema patra jharkhand case
Post a comment
Log in to write reviews