ಮಾಸ್ಕೋ : 22 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಹೆಲಿಕಾಪ್ಟರ್ ಇಂದು (ಆ.31) ರಷ್ಯಾದ ಪೂರ್ವದಲ್ಲಿರುವ ಕಮ್ಚಾಟ್ಕಾ ಪೆನಿನ್ಸುಲಾ ದ್ವೀಪ ಪ್ರದೇಶದಲ್ಲಿ ಕಣ್ಮರೆಯಾಗಿದೆ ಎಂದು ಫೆಡರಲ್ ಏರ್ ಟ್ರಾನ್ಸ್ಪೋರ್ಟ್ ಏಜೆನ್ಸಿಯು ಪ್ರಾಥಮಿಕ ವರದಿಯನ್ನು ದೃಢಪಡಿಸಿದೆ.
ಹೆಲಿಕಾಪ್ಟರ್ ನಲ್ಲಿ 19 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿಗಳಿದ್ದು, ನಾಪತ್ತೆಯಾಗಿರುವ ಬೆನ್ನಲ್ಲೇ ರಕ್ಷಣಾ ತಂಡ ಹುಡುಕಾಟ ಕಾರ್ಯಚರಣೆ ಆರಂಭಿಸಿದೆ ಎನ್ನಲಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಎಂಐ-8 ಹೆಲಿಕಾಪ್ಟರ್ ಕಮ್ಚಾಟ್ಕಾ ಪ್ರದೇಶದ ವಾಚ್ಕಜೆಟ್ಸ್‌ನಿಂದ ಟೇಕ್ ಆಫ್ ಆಗಿದ್ದು ಇದಾದ ಬಳಿಕ ತನ್ನ ಸಂಪರ್ಕ ಕಳೆದುಕೊಂಡಿದೆ ಎಂದು ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆ ವಿಚಾರ ಬಹಿರಂಗಪಡಿಸಿದೆ.
1960 ರ ದಶಕದಲ್ಲಿ ವಿನ್ಯಾಸಗೊಳಿಸಲಾದ ಎರಡು ಎಂಜಿನ್ ಹೊಂದಿರುವ ಹೆಲಿಕಾಪ್ಟರ್ Mi-8 ಅನ್ನು ರಷ್ಯಾ ಮತ್ತು ನೆರೆಯ ದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಇದಕ್ಕೂ ಮೊದಲು ಆಗಸ್ಟ್ 12 ರಂದು, 16 ಪ್ರವಾಸಿಗರನ್ನು ಹೊತ್ತ Mi-8 ಹೆಲಿಕಾಪ್ಟರ್ ರಷ್ಯಾದ ದೂರದ ಪೂರ್ವ ಪ್ರದೇಶವಾದ ಕಂಚಟ್ಕಾದಲ್ಲಿ ಪತನಗೊಂಡಿತ್ತು.
Post a comment
Log in to write reviews