Samayanews.

Samayanews.

2024-12-23 11:33:29

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸೈಫ್ ಅಲಿ ಖಾನ್ ನಟಿಸಿದ ʼದೇವರʼ ಸಿನಿಮಾದ ಟೀಸರ್ ಬಿಡುಗಡೆ

 

ಜೂ ಎನ್​ಟಿಆರ್ರವರು ‘ಆರ್​ಆರ್​ಆರ್’ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಜೂ ಎನ್​ಟಿಆರ್, ನಟಿಸುತ್ತಿರುವ ಮೊದಲ ಸಿನಿಮಾ ಇದು. ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ದೊಡ್ಡ ನಿರೀಕ್ಷೆಗಳನ್ನು ಮೂಡಿಸಿರುವ ದಕ್ಷಿಣದ ಸಿನಿಮಾಗಳಲ್ಲಿ ಒಂದು.

ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವಿದ್ದು, ಸಿನಿಮಾಕ್ಕಾಗಿ ಭಾರಿ ಮೊತ್ತವನ್ನು ಖರ್ಚು ಮಾಡಲಾಗಿದೆ. ವಿದೇಶಿ ತಂತ್ರಜ್ಞರನ್ನು ಕರೆಸಿ ದುಡಿಸಿಕೊಳ್ಳಲಾಗಿದೆ. ಸಿನಿಮಾದ ಕೆಲವು ಪೋಸ್ಟರ್, ಮೇಕಿಂಗ್ ದೃಶ್ಯಗಳು ಬಿಡುಗಡೆ ಆಗಿದ್ದು, ಕೆಲವು ದಿನಗಳ ಹಿಂದಷ್ಟೆ ಜೂ ಎನ್​ಟಿಆರ್-ಜಾನ್ಹವಿಯ ಹಾಡಿನ ಬಿಟ್ ಒಂದು ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ವಿಲನ್ ಪಾತ್ರದ ಟೀಸರ್ ಬಿಡುಗಡೆ ಆಗಿದ್ದು, ಈವರೆಗೆ ಬಿಡುಗಡೆ ಆಗಿರುವ ಅಪ್​ಡೇಟ್​ಗಳಲ್ಲಿಯೇ ಅದ್ಭುತವಾಗಿದೆ.

ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್, ‘ದೇವರ’ ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಸೈಫ್ ಪಾತ್ರದ ಹೆಸರು ಭೈರ. ಈಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ, ಕುಸ್ತಿ ಪಂದ್ಯಾವಳಿಯ ಅಖಾಡದಲ್ಲಿ ಭಾರಿ ದೇಹಾಕಾರದ, ಭಾರಿ ಜನಬೆಂಬಲ ಹೊಂದಿರುವ ವ್ಯಕ್ತಿಯೊಬ್ಬನನ್ನು ಸೈಫ್ ಅಲಿ ಖಾನ್ ಸುಲಭವಾಗಿ ಹೊಡೆದು ಉರುಳಿಸುವ ದೃಶ್ಯವಿದೆ. ಮಾತ್ರವಲ್ಲ ಭೈರನ ಸ್ಟೈಲ್, ಆತನ ಬಾಡಿ ಲಾಂಗ್ವೇಜ್, ಕ್ರೂರತನವನ್ನು ಪ್ರದರ್ಶಿಸುವ ಕೆಲವು ದೃಶ್ಯಗಳನ್ನು ಸಹ ಟೀಸರ್​ನಲ್ಲಿ ಸೇರಿಸಲಾಗಿದೆ. ‘ದೇವರ’ ಪಾತ್ರಕ್ಕೆ ತಕ್ಕದಾದ ಎದುರಾಳಿ ಎನಿಸುವಂತೆ ಸೈಫ್ ಅಲಿ ಖಾನ್​ರ ಪಾತ್ರದ ಪರಿಚಯ ಮಾಡಿಸಲಾಗಿದೆ.

‘ದೇವರ’ ಸಿನಿಮಾ ಸೆಪ್ಟೆಂಬರ್ 9 ರಂದು ದೇಶದಾದ್ಯಂತ ಒಟ್ಟಿಗೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಜಾನ್ಹವಿ ಕಪೂರ್ ನಾಯಕಿ ಬೇರೆ ಕೆಲವು ನಟಿಯರು ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಎನ್​ಟಿಆರ್ ಸಹೋದರ ಬಂಡವಾಳ ಹೂಡಿದ್ದು, ಜೂ ಎನ್​ಟಿಆರ್ ಸಹ ನಿರ್ಮಾಣ ಮಾಡಿದ್ದಾರೆ. ಜೂ ಎನ್​ಟಿಆರ್ ಅಭಿಮಾನಿಗಳು ಈ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಇರಿಸಿಕೊಂಡಿದ್ದಾರೆ. ‘ದೇವರ’ ಜೊತೆಗೆ ಹಿಂದಿಯ ‘ವಾರ್ 2’ ಸಿನಿಮಾದಲ್ಲಿ ಜೂ ಎನ್​ಟಿಆರ್ ನಟಿಸುತ್ತಿದ್ದಾರೆ. ಜೊತೆಗೆ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದಲ್ಲಿಯೂ ಸಹ ಜೂ ಎನ್​ಟಿಆರ್ ನಟಿಸುತ್ತಿದ್ದಾರೆ.

 

img
Author

Post a comment

No Reviews