ಗೃಹಲಕ್ಮಿ ಯೋಜನೆ ಹಣವನ್ನು ಕೂಡಿಟ್ಟು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಸಕ್ಕುಬಾಯಿ.
ರಾಜ್ಯಸರ್ಕಾರ ಜಾರಿಗೆ ತಂದಿದ್ದ ಗ್ಯಾರಂಟಿ ಯೋಜನೆಯಿಂದಾಗಿ ಸಾಮಾನ್ಯ ಜನತೆಗೆ ವರದಾನವಾಗಿವೆ. ಇದಕ್ಕೆ ನಿದರ್ಶನವೆಂಬಂತೆ ಹಲವಾರು ಮಹಿಳೆಯರು ಈ ಯೋಜನೆಗಳಿಂದಾಗಿ ತಮಗಾದ ಅನುಕೂಲವನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಸಾಕಷ್ಟು ಮಹಿಳೆಯರನ್ನ ಆರ್ಥಿಕ ಸಂಕಷ್ಟದಿಂದ ಪಾರುಮಾಡಿದೆ. ಗೃಹಲಕ್ಷ್ಮಿ ಯೋಜನೆ ಇಂದ ಪ್ರತಿ ತಿಂಗಳು ಸಿಗುವ 2000 ಹಣವನ್ನು ಬೆಳಗಾವಿ ಮೂಲದ ಸಕ್ಕುಬಾಯಿ ಎಂಬ ಮಹಿಳೆ ತನ್ನ ಶಸ್ತ್ರ ಚಿಕಿತ್ಸೆಗೆ ಬಳಸಿಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಂಡಿದ್ದಾರೆ. ಸಕ್ಕುಬಾಯಿ ತುಂಬಾ ವರ್ಷಗಳಿಂದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದ ಕಾರಣ ಚಿಕಿತ್ಸೆ ಪಡೆಯಲಾಗದೆ ಕಣ್ಣಿನಲ್ಲಿ ಪೊರೆ ಅವರಿಸಿದ್ದು, ತೀವ್ರ ನೋವಿಗೆ ತುತ್ತಾಗಿದ್ದರು. ಕಳೆದ 10 ತಿಂಗಳುಗಳಿಂದ ಬಂದ ಗೃಹಲಕ್ಮಿ ಯೋಜನೆ ಹಣವನ್ನ ಕೂಡಿಟ್ಟು ಇದೀಗ ಸಕ್ಕುಬಾಯಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಸದ್ಯ ಕಣ್ಣಿನ ಸಮಸ್ಯೆಯಿಂದ ಹೊರ ಬಂದಿರೋ ಮಹಿಳೆ ರಾಜ್ಯಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
Post a comment
Log in to write reviews