ಒಳಚರಂಡಿ ನೀರು ಮಿಶ್ರಣಗೊಂಡ ಕೊಳವೆ ಬಾವಿಯ ನೀರನ್ನು ಅಂಗನವಾಡಿ ಮಕ್ಕಳ ಬಿಸಿ ಊಟಕ್ಕೆ ಬಳಸುತ್ತಿರುವ ಆತಂಕಕಾರಿ ಸುದ್ದಿ ವಿಜಯನಗರದ ಕೂಡ್ಲಿಗಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬಣವಿಕಲ ಗ್ರಾಮದ ಕೆರೆಗೆ, ಊರಿನ ಚರಂಡಿ ನೀರು ಸೋರಿಕೆಯಾಗಿ ಕೊಳವೆ ಬಾವಿಯ ನೀರಿನೊಂದಿಗೆ ಮಿಶ್ರಣವಾಗಿದ್ದು ಈ ಕಲುಷಿತ ನೀರನ್ನೇ ಊರಿನವರು ಬಳಸುತ್ತಿದ್ದು, ಜೊತೆಗೆ ಅಂಗನವಾಡಿಯ ಬಿಸಿಯೂಟಕ್ಕೂ ಬಳಕೆಯಾಗುತ್ತಿದೆ.
ತೆರೆದ ಬಾವಿ ಮತ್ತು ಒಂದು ಕೊಳವೆ ಬಾವಿ ಇದ್ದು ಇವೆರೆಡು ಕೊಳಚೆ ನೀರಿನ ಮಿಶ್ರಣದಿಂದ ಕಲುಷಿತವಾಗಿದೆ. ಪರ್ಯಾಯ ಮಾರ್ಗವಿಲ್ಲದೆ ಇಲ್ಲಿನ ಗ್ರಾಮಸ್ಥರು ಇದೇ ನೀರನ್ನು ಅಡುಗೆ ಸಹಿತ ದಿನನಿತ್ಯದ ಅವಶ್ಯಕತೆಗೆ ಬಳಸುತ್ತಿದ್ದಾರೆ.
ಅಂಗನವಾಡಿಯ ಬಡ ಮಕ್ಕಳ ಮಧ್ಯಾನ್ನದ ಬಿಸಿ ಊಟದ ತಯಾರಿಕೆಗೂ ಇದೇ ಕಲುಷಿತ ನೀರು ಬಳಸುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಆತಂಕ ಉಂಟಾಗಿದೆ.
ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದರೂ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಊರಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಧ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಗ್ರಾಮ ಪಂಚಾಯತಿ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
Tags:
- India News
- Kannada News
- water crisis
- water
- water scarcity
- water problem
- water shortage
- clean water
- water jug problem
- nashik water problem
- drinking water
- drinking water problem
- bengaluru water problem
- africa water problems
- water problems in india
- solutions to water problem
- water conservation
- water crisis in india
- problem of drinking water
- water tankers
Post a comment
Log in to write reviews