ನೋಯ್ಡಾ: ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಕಂದಾಯ ಸೇವೆ ಅಧಿಕಾರಿಯೊಬ್ಬರನ್ನು ಬಂಧಿಸಿರುವ ಘಟನೆ ನೋಯ್ದಾದಲ್ಲಿ ನಡೆದಿದೆ. ಮೇ 25 ರಂದು ಸಂಜೆ ನೋಯ್ಡಾ ಸೆಕ್ಟರ್ 100 ರ ಲೋಟಸ್ ಬೌಲೆವರ್ಡ್ ಸೊಸೈಟಿಯಲ್ಲಿ ಶಿಲ್ಪಾ ಎನ್ನುವ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಬಂದ ದೂರಿನ ಹಿನ್ನೆಲೆಯಲ್ಲಿ ಐಆರ್ ಎಸ್ ಅಧಿಕಾರಿ ಸೌರಭ್ ಮೀನಾ ಅವರನ್ನ ಪೊಲೀಸರು ಬಂಧಿಸಿದ್ದಾರೆ.
ಐಆರ್‌ಎಸ್ ಅಧಿಕಾರಿ ಸೌರಭ್ ಮೀನಾ ಹಾಗೂ ಮೃತ ಶಿಲ್ಪಾ ಗೌತಮ್ ಕಳೆದ ಮೂರು ವರ್ಷಗಳಿಂದ ಲಿವ್ ಇನ್ ರಿಲೇಷನ್ ನಲ್ಲಿದ್ದರು. ಶಿಲ್ಪಾ ಭಾರತ್ ಹೆವಿ ಎಲೆಕ್ಟಿಕಲ್ಸ್ ಲಿಮಿಟೆಡ್ ಗೆ ಉಪ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಸೌರಭ್ ಕುಡಾ ಅದೆ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿದ್ದರು.
ಶಿಲ್ಪಾ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ, ಈ ವಿಚಾರ ತಿಳಿದ ಪೊಲೀಸರು ಆಕೆಯ ಪೋಷಕರೊಂದಿಗೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದಾರೆ. ಸೌರಭ್ ಜೊತೆ ಲಿವ್ ಇನ್ ರಿಲೇಷನ್ ನಲ್ಲಿದ್ದರು ಶಿಲ್ಪಾ ಮದುವೆಯಾಗುವಂತೆ ಓತ್ತಾಯ ಮಾಡಿದ್ದಾರೆ. ಈ ಕಾರಣದಿಂದ ಇಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತು. ಶಿಲ್ಪಾಳ ಮೇಲೆ ಸೌರಭ್ ಹಲವು ಬಾರಿ ಹಲ್ಲೆನೂ ನಡೆಸಿದ್ದಾನೆ ಎಂದು ಪೋಷಕರು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ಇದರ ಆದಾರದ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಅವರ ದೂರಿನ ಮೇರೆಗೆ ಪೊಲೀಸರು ಸೌರಬ್‌ನನ್ನು ಬಂಧಿಸಿದ್ದಾರೆ. ಘಟನೆಯ ಸಮಯದಲ್ಲಿ ಸೌರಭ್ ಅಪಾರ್ಟ್‌ಮೆಂಟ್‌ನಲ್ಲಿದ್ದರು ಎನ್ನುವ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿದು ಬಂದಿದೆ.
Post a comment
Log in to write reviews