ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತ ವಿಶ್ವಪ್ರಸಿದ್ಧ. ಮಳೆಗಾಲದ ಸಮಯದಲ್ಲಿ ಅದನ್ನು ನೋಡಲು ಅಸಂಖ್ಯಾತ ಪ್ರವಾಸಿಗರು ದೇಶವಿದೇಶಗಳಿಂದ ಬರುತ್ತಾರೆ. ಅದರೆ ಶಿವಮೊಗ್ಗ ನಗರದ ಆಶ್ವಥ್ ನಗರದಲ್ಲಿ ಇದೊಂದು ಫೇಕ್ ಜಲಪಾತ ಸೃಷ್ಟಿಯಾಗಿದೆ.
ಜೋರಾಗಿ ಮಳೆ ಸುರಿದಿರುವುದರಿಂದ ಅಶ್ವಥ್ ನಗರದಲ್ಲಿರುವ ಗಾರೆ ಕಾಲುವೆ ತುಂಬಿ ಹರಿಯುತ್ತಿದ್ದು ಜಲಪಾತದಂಥ ಚಿತ್ರಣ ಮೂಡಿದೆ. ರಾಜ್ಯದ 6 ಸ್ಮಾರ್ಟ್ ಸಿಟಿ ಯೋಜನೆಯ ಆರು ನಗರಗಳಲ್ಲಿ ಶಿವಮೊಗ್ಗ ಕೂಡ ಒಂದು. ಉಳಿದ ಐದು ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಾವಣಗೆರೆ, ತುಮಕೂರು ಮತ್ತು ಮಂಗಳೂರು. ವಿಷಾದಕರ ಸಂಗತಿಯೆಂದರೆ ಇವುಗಳಲ್ಲಿ ಯಾವ ನಗರವೂ ಸ್ಮಾರ್ಟ್ ಸಿಟಿಯಾಗಿ ರೂಪುಗೊಂಡಿಲ್ಲ. ಶಿವಮೊಗ್ಗದ ಈ ರಸ್ತೆಯನ್ನು ನೋಡಿ. ವಾಹನಗಳ ಅರ್ಧಚಕ್ರ ಮುಳುಗುವಷ್ಟು ಚರಂಡಿ ನೀರು ರಸ್ತೆಯ ಮೇಲಿದೆ. ಶಿವಮೊಗ್ಗದ ಸಂಸದ ಬಿವೈ ರಾಘವೇಂದ್ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತಾನೊಬ್ಬ ಅಭಿವೃದ್ಧಿ ಹರಿಕಾರನೆಂಬಂತೆ ಮಾತಾಡಿದ್ದರು, ಜನರ ಕಣ್ಣಿಗೆ ಕಾಣಿಸುತ್ತಿರೋದೆ ಬೇರೆ.
Post a comment
Log in to write reviews