Samayanews.

Samayanews.

2024-12-24 12:31:11

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸಿಲಿಕಾನ್​ ಸಿಟಿ ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್

ಬೆಂಗಳೂರು: ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್, ಇದು ಸಿಲಿಕಾನ್​ ಸಿಟಿ ಬೆಂಗಳೂರಿನ ಸದ್ಯದ ಪರಿಸ್ಥಿತಿಯಾಗಿದೆ. ಸೋಮವಾರ (ಆಗಸ್ಟ್‌ 5,2024) ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ನದಿಯಂತಾಗಿದ್ದವು. ಅಂಡರ್​​ಪಾಸ್​ಗಳಲ್ಲಿ ಮಂಡಿಯುದ್ದ ನೀರು ನಿಂತಿದ್ದು, ಕಿಲೋಮೀಟರ್​​ವರೆಗೂ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಮಳೆಯಿಂದ ಇಷ್ಟೆಲ್ಲಾ ಅವಾಂತರ ಆಗಿರುವ ಮಧ್ಯೆ ಇದೀಗ ಗುಂಡಿಗಳದ್ದೇ ಗಂಡಾಂತರ ಶುರುವಾಗಿದೆ.
ಬೆಂಗಳೂರಿನ ನಾಗವಾರ-ಹೆಬ್ಬಾಳ ಸಂಪರ್ಕಿಸುವ ಹಿರಣ್ಯಪಾಳ್ಯ ಮುಖ್ತರಸ್ತೆಯಲ್ಲಿ ಗುಂಡಿಗಳು ವಿಪರೀತವಾಗಿವೆ. ನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ರಸ್ತೆಯಲ್ಲೇ ದೊಡ್ಡ ಗುಂಡಿ ಬಿದ್ದು ಮಳೆ ನೀರು ತುಂಬಿದೆ. ಇದೆಲ್ಲಾ ಬಿಟ್ಟಿ ಭಾಗ್ಯದ ಪರಿಣಾಮ ಅನಿಸುತ್ತಿದೆ. ಪರಿಸ್ಥಿತಿ ತುಂಬಾ ಕೆಟ್ಟು ಹೋಗಿದೆ ಎಂದು ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.
ಇದಿಷ್ಟೇ ಅಲ್ಲ, ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್​ನಲ್ಲೂ ಇದೇ ಪರಿಸ್ಥಿತಿ ಇದೆ. ಅಳೆತ್ತರದ ಗುಂಡಿಯಲ್ಲೇ ಬಿಎಂಟಿಸಿ ಬಸ್​ಗಳು ಸಂಚಾರಿಸುವ ಪರಿಸ್ಥಿತಿ ಇದೆ. ಸೋಮವಾರ ರಾತ್ರಿ ಸುರಿದ ಮಳೆಯಿಂದ ಗುಂಡಿಗಳಲ್ಲಿ ನೀರು ನಿಂತಿದೆ.ಇನ್ನು ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್​, ಮಾಗಡಿ ರಸ್ತೆ, ನಾಗರಬಾವಿ, ಬೆಂಗಳೂರು ವಿವಿಗೆ ಸಂಪರ್ಕಿಸುವ ರಸ್ತೆಯಲ್ಲಿ ಪ್ರತಿಬಾರಿ ಮಳೆ ಬಂದಾಗಲೆಲ್ಲ ಇದೇ ಸಮಸ್ಯೆ ಆಗ್ತಿದೆ. ಕೂಡಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತು ಕ್ರಮಕೈಗೊಳ್ಳಬೇಕಿದೆ.
 

img
Author

Post a comment

No Reviews