ಬೆಂಗಳೂರು: ಬಿಬಿಎಂಪಿ ಅರ್ ಓ ಪ್ಲಾಂಟ್ ಗಳ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ಆತಂಕಕಾರಿ ವರದಿಯನ್ನ ಬಯೋಲಾಜಿಕಲ್ ಸಂಸ್ಥೆ ಹೊರ ಹಾಕಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕಡಿಮೆ ಬೆಲೆಗೆ ಕುಡಿಯುವ ನೀರಿನ ಘಟಕಗಳನ್ನ ತರೆಯಲಾಗಿತ್ತು. ಇದೀಗ ಅ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿರುವ ವರದಿ ಬಹಿರಂಗವಾಗಿದೆ.
ಬಿಬಿಎಂಪಿ ಅಡಿಗೆ ಒಳಪಡುವ ಬೋರ್ ವೆಲ್ ಗಳಲ್ಲಿಯೂ ಬ್ಯಾಕ್ಟೀರಿಯಾ ಅಂಶ ಪತ್ತೆ ಅಗಿರುವ ಬಗ್ಗೆ ಬಯಲಾಜಿಕಲ್ ವರದಿ ತಿಳಿಸಿದೆ. ನಗರದ 217ಕೊಳವೆ ಬಾವಿಗಳ ನೀರನ್ನು ಹಾಗೂ 1218 ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಪರೀಕ್ಷೆ ಗೆ ಒಳಪಡಿಸಲಾಗಿತ್ತು. ಪರೀಕ್ಷೆ ನಡೆಸಿದ ಬಳಿಕ ಬಯೋಲಾಜಿಕಲ್ ಸಂಸ್ಥೆ ಬಿಬಿಎಂಪಿಗೆ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದೆ.
ವರದಿಯಲ್ಲಿ ನಗರದ ಕೆಲ ಭಾಗಗಳಲ್ಲಿ ಬೋರ್ ವೆಲ್ ನೀರು, ಶುದ್ಧ ಕುಡಿಯುವ ನೀರಿನ ಘಟಕದ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿಸಿದೆ.ಬೊಮ್ಮನಹಳ್ಳಿ ವಲಯ. ಬೆಂಗಳೂರು ದಕ್ಷಿಣ ವಲಯ. ಮಹಾದೇವಪುರ ವಲಯಗಳಲ್ಲಿ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಸದ್ಯಕ್ಕೆ ಬ್ಯಾಕ್ಟೀರಿಯಾ ಪತ್ತೆಯಾದ ಆರ್ ಓ ಪ್ಲಾಂಟ್ ಗಳು ಹಾಗೂ ಬೋರ್ ವೆಲ್ ಗಳ ನೀರು ಪೂರೈಕೆಯನ್ನ ಸ್ಥಗಿತ ಮಾಡಲಾಗಿದೆ.
805 ಕಡೆ ನೀರಿನ ವರದಿ ಬರಬೇಕಾಗಿದ್ದು ಪರೀಕ್ಷೆಗೆ ಒಳಪಡದ ನೀರಿನ ಶೇಖರಣೆ ಘಟಕಗಳನ್ನು ಪರೀಕ್ಷೆಗೆ ಒಳಪಡಿಸಲು ಪಾಲಿಕೆ ಮುಂದಾಗಿದೆ. ಒಂದು ವಾರದಲ್ಲಿ ಪರೀಕ್ಷೆ ನಡೆಸಿ ವರದಿ ನೀಡುವಂತೆ ಪಾಲಿಕೆಯ ವಿಶೇಷ ಅಯುಕ್ತರು ಸೂಚನೆ ನೀಡಿದ್ದಾರೆ.
Post a comment
Log in to write reviews