ಪ್ಯಾರಿಸ್ : ಒಲಿಂಪಿಕ್ಸ್ ಕುಸ್ತಿ ಫೈನಲ್‌ನಿಂದ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ವಿಶ್ವ ಕುಸ್ತಿ ಫೆಡರೇಶನ್ ವಿರುದ್ಧ ಜಾಗತಿಕ ಕ್ರೀಡಾ ನ್ಯಾಯಾಲಯ ಮೇಲನ್ಮವಿ ಸಲ್ಲಿಸಿದ್ದ ವಿನೇಶ್ ಪೋಗಟ್‌ಗೆ ಹಿನ್ನಡೆಯಾಗಿದೆ.
ನ್ಯಾಯಯುತವಾಗಿ ಫೈನಲ್ ಪ್ರವೇಶಿಸಿದ್ದಕ್ಕೆ ಬೆಳ್ಳಿ ಪದಕ ನೀಡಬೇಕು ಎಂದು ವಿನೇಶ್ ಸಲ್ಲಿಸಿದ ಮೇಲ್ಮನವಿಯನ್ನು ಜಾಗತಿಕ ಕ್ರೀಡಾ ನ್ಯಾಯಲಯದ ತಾತ್ಕಾಲಿಕ ಪೀಠ ತಿರಸ್ಕರಿಸಿದೆ. ಹೀಗಾಗಿ ಬೆಳ್ಳಿ ಪದಕ ನಿರೀಕ್ಷೆಯಲ್ಲಿದ್ದ ವಿನೇಶ್‌ಗೆ ಭಾರೀ ನಿರಾಶೆಯಾಗಿದೆ
ವಿನೇಶ್ರ ಅರ್ಜಿ ಸ್ವೀಕರಿಸಿದ ಜಾಗತಿಕ ಕ್ರೀಡಾನ್ಯಾಯಾಲಯ ಎರಡೂ ಕಡೆಗಳವಾದ ಆಲಸಿ ಪ್ಯಾರಿಸ್ ಒಲಿಂಪಿಕ್ಸ್ ಮುಗಿಯುವ ಮೊದಲು ತೀರ್ಪು ನೀಡುವುದಾಗಿ ತಿಳಿಸಲಾಗಿತ್ತು ಆದರೆ ಆಗಸ್ಟ 13 ರಂದು ತೀರ್ಪು ನೀಡುವುದಾಗಿ ತಿಳಿಸಿದರು ತೀರ್ಪು ಹೊರಬಿದ್ದಿರಲಿಲ್ಲ ಬಳಿಕ ತೀರ್ಪುನನ್ನ ಆಗಸ್ಟ 16ಕ್ಕೆ ಮುಂದೂಡಿಕೆ ಮಾಡಿರುವುದಾಗಿ ಮಂಗಳವಾರ ತಿಳಿಸಿತ್ತು. ತೀರ್ಪಿನ ಸಂಬಂಧ ಮಾಹಿತಿ ಹಂಚಿಕೊಳ್ಳಲು ಮಂಗಳವಾರ ಸುದ್ದಿಗೋಷ್ಠಿ ಕರೆದಿದ್ದ ಐಒಎ, ದಿಢೀರನೆ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಿ ಬುಧುವಾರ ರಾತ್ರಿ ಅನಿರೀಕ್ಷಿತವಾಗಿ ಸಿಎಎಸ್ ತನ್ನ ತೀರ್ಪನ್ನು ಪ್ರಕಟಿಸಿದೆ.ಇದರಿಂದ ವಿನೇಶ್ ಪೋಗಟ್‌ಗೆ ನಿರಾಶೆಯಾಗಿದೆ
Post a comment
Log in to write reviews