ಚರ್ಮದಲ್ಲಿ ಇರುವ ವಿಭಿನ್ನತೆಯಲ್ಲಿ ಒಣ ಚರ್ಮ ಅಥವಾ ಒಣ ತ್ವಚೆಯು ಒಂದು. ಈ ಬಗೆಯ ಚರ್ಮವು ವ್ಯಕ್ತಿ ಆನುವಂಶಿಕವಾಗಿ ಅಥವಾ ಇತರ ಅಡ್ಡ ಪರಿಣಾಮಗಳಿಂದಲೂ ಉಂಟಾಗಬಹುದು. ಪರಿಸರದಲ್ಲಿ ಇರುವ ಶಾಖ, ಧೂಳು, ಹವಾಮಾನದ ವೈಪರೀತ್ಯ, ಸಾಬೂನು ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳಿಂದ ಒಣ ತ್ವಚೆಯು ಉಂಟಾಗಬಹುದು. ಇಂತಹ ಸಮಸ್ಯೆಗಳು ಉಂಟಾದಾಗ ಕೆಲವು ಪರಿಣಾಮಕಾರಿ ಮನೆ ಮದ್ದು ಆರೈಕೆಯನ್ನು ಮಾಡುವುದರ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಬಹುದು.
ನಿಮ್ಮ ಒಣ ಚರ್ಮವನ್ನು ನಿಯಂತ್ರಿಸಲು ಈ ಮನೆಮದ್ದನ್ನು ಬಳಸಿ ನೋಡಿ
ಅರ್ಧ ಕಪ್ ಹಾಲ, ಎರಡು ಟೀ ಸ್ಪೂನ್ ತೆಂಗಿನ ಎಣ್ಣೆ, ಒಂದು ಟೀ ಸ್ಪೂನ್ ಬಾದಾಮಿ ಎಣ್ಣೆ, ಒಂದು ಟೀ ಸ್ಪೂನ್ ಅರಿಶಿನ ಸೇರಿಸಿ ಮಿಶ್ರಣ ಮಾಡಿಕೊಂಡು ಅದನ್ನು ನಿಮ್ಮ ಒಣ ತ್ವಚೆಗೆ ಹಚ್ಚಿಕೊಂಡು 25 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ. ನಂತರ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ ಇದರಿಂದ ನಿಮ್ಮ ವಣತ್ವಚೆಯ ಸಮಸ್ಯೆ ಕ್ರಮೇಣವಾಗಿ ಕಡಿಮೆ ಆಗುತ್ತದೆ.
Post a comment
Log in to write reviews