ಬೆಂಗಳೂರು: ರಂಗಭೂಮಿ ಕಲಾವಿದೆ, ಕಂಚಿನ ಕಂಠದ ಗಾಯಕಿ ನಟಿ ಬಿ ಜಯಶ್ರೀ ಅವರಿಗೆ ಇಂದು (ಭಾನುವಾರ, ಜೂನ್ 9) ಹುಟ್ಟುಹಬ್ಬದ ಸಂಭ್ರಮ. ಹಿರಿಯ ನಟಿ ಇಂದು 74 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಿ.ಜಯಶ್ರೀ ಅವರಿಗೆ ಚಿತ್ರರಂಗದ ಗಣ್ಯರು, ರಂಗಭೂಮಿ ಕಲಾವಿದರು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.
ಗಾಯಕಿಯಾಗಿರುವ ಜೊತೆಗೆ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಹಿರಿಯ ಕಲಾವಿದೆಯ ಮಿಂಚಿನ ಕಂಠದ ಗಾಯನದಿಂದಾಗಿ 2013 ರಲ್ಲಿ ಪದ್ಮಶ್ರಿ ಪ್ರಶಸ್ತಿಗೆ ಭಾಜನರಾಗಿದ್ದರು.
ಬಿ.ಜಯಶ್ರೀ 1950 ಜೂನ್ 9 ರಂದು ಬಸವರಾಜ್ ಹಾಗೂ ಜಿ.ವಿ.ಮಾಲತಮ್ಮ ಅವರ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು. ರಂಗಭೂಮಿಯ ಹೆಸರಾಂತ ಕಲಾವಿದ ಗುಬ್ಬಿ ವೀರಣ್ಣರ ಮೊಮ್ಮೊಗಳಾದ ಇವರು ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪದಾರ್ಪಣೆ ಮಾಡಿದರು. ರಂಗಭೂಮಿಯ ಅಭಿಯದಿಂದ ಗಳಿಸಿದ ಜನಪ್ರಿಯತೆ ಇವರನ್ನು ನಾಟಕಗಳ ನಿರ್ದೇಶನಕ್ಕೆ ಕೊಂಡೊಯ್ದಿತು. ರಂಗಾಯಣದ ಮುಖ್ಯಸ್ಥರಾಗಿ ,2010 ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ಕೆಲಸ ಮಾಡಿರುವ ಅವರಿಗೆ ಕೇಂದ್ರ ಸಂಗೀತ ನಾಟಕ ಪ್ರಶಸ್ತಿ ಸಂದಿದೆ.
ನಾಗಮಂಡಲ, ದುರ್ಗಿ, ಕೌರವ, ಕೇರ್ ಆಫ್ ಪುಟ್ ಪಾರ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ರಂಜಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಕಲಾವಿದರಿಗೆ ಕಂಠದಾನ ಸಹ ಮಾಡಿದ್ದಾರೆ.
ಬಿ ಜಯಶ್ರಿ ಗೆ ಸಂದ ಪ್ರಶಸ್ತಿಗಳು
2013 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ.
ಕೇಂದ್ರ ಸಂಗೀತ ನಾಟಕ ಪ್ರಶಸ್ತಿ.
ಸಫ್ದಾರ್ ಹಷ್ಮಿ ಪ್ರಶಸ್ತಿ.
ಆರ್ಯಭಟ ಪ್ರಶಸ್ತಿ.
ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ.
ಬಿ.ವಿ.ಕಾರಂತ ಪುರಸ್ಕಾರ.
ಸಂದೇಶ ಕಲಾ ಪ್ರಶಸ್ತಿ.
ರಾಜ್ಯೋತ್ಸವ ಪ್ರಶಸ್ತಿಗಳು ಲಭ್ಯವಾಗಿದ್ದು ಜೊತೆಗೆ ಅನೇಕ ಗೌರವ ಪ್ರಶಸ್ತಿಗಳು ಕೂಡ ಸಿಕ್ಕಿವೆ.
Post a comment
Log in to write reviews