ಹಾಸನ: ಭವಾನಿ ರೇವಣ್ಣ ಅವರ ವಿಚಾರಣೆಗಾಗಿ ಹೊಳೆನರಸೀಪುರದ ಎಚ್.ಡಿ.ರೇವಣ್ಣ ನಿವಾಸ ಚೆನ್ನಾಂಬಿಕಾಕ್ಕೆ ಆಗಮಿಸಿರುವ ಎಸ್ಐಟಿ ಅಧಿಕಾರಿಗಳು ಕಾದು ಕುಳಿತಿದ್ದಾರೆ.
ಬೆಳಗ್ಗೆಯೇ ಆಗಮಿಸಿರುವ ಎಸ್ಐಟಿ ಇನ್ಸ್ ಪೆಕ್ಟರ್ ಶ್ರೀಧರ್ ಅವರು KA-04-AF-1249 ನಂಬರ್ ನ ಕಾರಿನಲ್ಲಿ ಆಗಮಿಸಿದ ಎಸ್ಐಟಿ ತಂಡದಲ್ಲಿ ಮಹಿಳಾ ಅಧಿಕಾರಿ ಕೂಡ ಇದ್ದಾರೆ.
ಎಚ್.ಡಿ.ರೇವಣ್ಣ ನಿವಾಸದ ಗೇಟ್ ತೆಗೆದುಕೊಂಡು ಮನೆಯ ಆವರಣಕ್ಕೆ ಎಸ್ಐಟಿ ಮಹಿಳಾ ಅಧಿಕಾರಿ ಬಂದಿದ್ದಾರೆ. ಮನೆಯ ಆವರಣದಲ್ಲಿ ಈಗಾಗಲೇ ಕಾಯುತ್ತಿರುವ ಇನ್ಸ್ಪೆಕ್ಟರ್ ಶ್ರೀಧರ್ ಅವರ ತಂಡ ಕಾಯುತ್ತಿದೆ. ನಾಪತ್ತೆಯಾಗಿರುವ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗದಿದ್ದರೆ ಎಸ್ಐಟಿ ಅಧಿಕಾರಿಗಳು ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಕುತೂಹಲ ಮೂಡಿದೆ.
Post a comment
Log in to write reviews