ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಆರು ಭದ್ರತಾ ಸಿಬ್ಬಂದಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ನಡೆದ ಕೊನೆಯ ಹಂತದ ಮತದಾನ ನಡೆದ ಸಂದರ್ಭದಲ್ಲಿ ಭದ್ರತೆಗಾಗಿ 23 ಯೋಧರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಅವರಲ್ಲಿ 6 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. 2 ಜವಾನರ ಸ್ಥಿತಿ ಗಂಭೀರವಾಗಿದೆ. ಮೃತರಿಗೆ ತೀವ್ರತರವಾದ ಜ್ವರವಿತ್ತು, ಅವರ ರಕ್ತದೊತ್ತಡ ತೀವ್ರವಾಗಿ ಶುಗರ್ ಮಟ್ಟ ಹೆಚ್ಚಳವಾಗಿದ್ದ ಕಾರಣ ಕುಸಿದು ಬಿದ್ದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯೋಧರ ಸಾವಿಗೆ ತೀವ್ರ ಉಷ್ಟಾಂಶ ಕಾರಣವಾಗಿದೆ ಎನ್ನಲಾಗಿದ್ದು, ಉತ್ತರ ಭಾರತದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಏರುತ್ತಿದೆ. ಉಷ್ಣಾಂಶದ ಪ್ರಮಾಣ 50 ಸೆಲ್ಸಿಯಸ್ ದಾಟುತ್ತಿದೆ. ಇದು ಜನರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಸದ್ಯ ಯೋಧರ ಸಾವಿಗೂ ಅಧಿಕ ಉಷ್ಣಾಂಶವು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
Post a comment
Log in to write reviews