Samayanews.

Samayanews.

2024-12-24 12:03:19

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಗಗನಕ್ಕೇರಿದ ಬೆಂಗಳೂರು ಮನೆ ಬಾಡಿಗೆ..! ಬಾಡಿಗೆ ಮನೆಯವರ ಪರಿಸ್ಥಿತಿ ಗಂಭೀರ

ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮಧ್ಯಮ ವರ್ಗದ ಜನತೆಗೆ ಮೆಟ್ರೋ ಪಾಲಿಟನ್ ನಗರಗಳಲ್ಲಿ ಮನೆ ಬಾಡಿಗೆಯೇ ಅತಿ ದೊಡ್ಡ ಖರ್ಚು. ಬೆಂಗಳೂರು ನಗರದಲ್ಲಿ ಮನೆ ಬಾಡಿಗೆ ದರ ಗಗನಕ್ಕೇರಿರುವುದು ಮಧ್ಯಮ ವರ್ಗದ ಜನತೆಯ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿದೆ.

ದೇಶ, ವಿದೇಶದ ಹಲವು ಜನರಿಗೆ ಉದ್ಯೋಗ, ಶಿಕ್ಷಣಕ್ಕೆ ನೆಲೆಯಾಗಿರುವ ಬೆಂಗಳೂರು ನಗರದಲ್ಲಿ ಮನೆ ಬಾಡಿಗೆ ಹೆಚ್ಚಳವಾಗಿದೆ. ದೇಶದ ಇತರ ನಗರಗಳಿಗೆ ಹೋಲಿಕೆ ಮಾಡಿದರೆ ಮನೆ ಬಾಡಿಗೆ ಹೆಚ್ಚಳದಲ್ಲಿ ನಗರ 2ನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಬಾಡಿಗೆ ದರವನ್ನು ಶೇ.8ರಷ್ಟು ಹೆಚ್ಚಳ ಮಾಡಲಾಗಿದೆ.

ಯಾವ ಏರಿಯಾದಲ್ಲಿ ಎಷ್ಟಿದೆ ಬಾಡಿಗೆ?

2024ರ ಮೊದಲ ತ್ರೈಮಾಸಿಕದಲ್ಲಿ, ಸರಾಸರಿ ಬಾಡಿಗೆಯು ಸರ್ಜಾಪುರದಲ್ಲಿ 34,000 ರೂ., ಮತ್ತು ವೈಟ್‌ಫೀಲ್ಡ್‌ನಲ್ಲಿ 32,500 ರೂ.ಗೆ ಏರಿಕೆಯಾಗಿದೆ.‌ ಇದಲ್ಲದೇ ಬೆಂಗಳೂರಿನ ಹೈ ಫೈ ಏರಿಯಾಗಳಾದ ಮಲ್ಲೇಶ್ವರಂ, ಕೋರಮಂಗಲ, ಡಾಲೋರ್ಸ್ ಕಾಲೋನಿ, ಸದಾಶಿವನಗರ, ಜಯನಗರ, ಜೆಪಿನಗರ, ರಾಜಾಜಿನಗರ, ಆರ್ ಆರ್ ನಗರ, ಇಂದಿರಾನಗರ, ಸೇರಿದಂತೆ ಪ್ರಸಿದ್ಧ ಏರಿಯಾಗಳಲ್ಲೂ ಬಾಡಿಗೆ ದಾಖಲೆ ಬರೆಯುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ಬೆಂಗಳೂರಿನಲ್ಲಿ ಅತಿಹೆಚ್ಚು ಬೆಲೆ ಏರಿಕೆಯಾಗಿದ್ದು, ಸಿಲಿಕಾನ್ ಸಿಟಿ ತುಂಬ ದುಬಾರಿ ಎನ್ನುವಂತಾಗಿದೆ.

ಬಾಡಿಗೆಹೆಚ್ಚಳಕ್ಕೆಕಾರಣವೇನು?

ಕೊರೋನಾ ಸಂದರ್ಭದಲ್ಲಿ ಐಟಿಬಿಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ನೀಡಿದ್ದವು. ಇದೀಗ ಕೋವಿಡ್ ಸಮಯದಲ್ಲಿ ಮುಚ್ಚಿದ್ದ ಆಫೀಸ್ಗಳು ಒಪನ್ ಆಗುತ್ತಿದ್ದು, ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿವೆ. ಐಟಿ-ಬಿಟಿ ನೌಕರರಿಂದ ಹೆಚ್ಚಾಗಿ ಮನೆಗಳಿಗೆ ಬೇಡಿಕೆ ಇದೆ. ‌ಅಲ್ಲದೆ, ಈಗ ಉದ್ಯೋಗ ಅರಸಿ ಬರುವವರ ಸಂಖ್ಯೆಯೂ ಜಾಸ್ತಿಯಾಗಿದೆ.‌ ಆದರೆ, ನಮ್ಮ ಬಾಡಿಗೆ ಮನೆ ನಮ್ಮ ನಿರೀಕ್ಷೆಯ ಆದಾಯಷ್ಟು ಬರ್ತಾ ಇಲ್ಲ ಅಂತ ಮನೆ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಚಿಕ್ಕಮನೆಗಳಿಗೆ 7 ರಿಂದ 10 ಸಾವಿರ

ಒಟ್ಟಾರೆಯಾಗಿ ಇದೇ ರೀತಿಯಾಗಿ ಮನೆಯ ಬಾಡಿಗೆ ಹೆಚ್ಚಳವಾಗುತ್ತಿದ್ದರೆ ಬಡಜನರು ಜೀವನ‌ ಮಾಡುವುದು ಹೇಗೆ? ಚಿಕ್ಕ ಮನೆಗಳಿಗೆ 7 ರಿಂದ 10 ಸಾವಿರ ಕೇಳುತ್ತಾರೆ.‌ ಕೂಲಿ ಕೆಲಸ ಮಾಡಿ ಅಷ್ಟು ಬಾಡಿಗೆ ಕಟ್ಟುವುದಕ್ಕೆ ಆಗುತ್ತದೆಯೇ? ಈ ಕುರಿತಾಗಿ ಅಧಿಕಾರಿಗಳು ಕ್ರಮ ತಗೆದುಕೊಳ್ಳಬೇಕು‌ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

img
Author

Post a comment

No Reviews