ನವದೆಹಲಿ: ಲೋಕಸಭೆ ಚುನಾವಣೆ ಕೊನೆಯ ಹಂತದ ಮತದಾನ ಮುಗಿದ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿವೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಆದರೆ ಇದನ್ನು ವಿಪಕ್ಷಗಳು ಒಪ್ಪಿಕೊಂಡಿಲ್ಲ.
ಆದರೆ ಇಂತಹ ಸಮೀಕ್ಷೆಗಳು ಅಂತಿಮ ಸತ್ಯವಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿದೆ. ನಿಖರ ಫಲಿತಾಂಶಕ್ಕಾಗಿ ಜೂನ್ 4ರವರೆಗೆ ಕಾಯಬೇಕಿದೆ.
ಸುಳ್ಳಾದ ಕೆಲವು ಸಮೀಕ್ಷೆಗಳು:
2004ರಲ್ಲಿ ವಾಜಪೇಯಿ ನೇತೃತ್ವದ ಎನ್.ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ. ಇಂಡಿಯಾ ಶೈನಿಂಗ್ ಪ್ರಚಾರದಿಂದ ಮತ್ತೊಮ್ಮೆ ಎನ್.ಡಿಎ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ ಎಂದು ಎಂದು ಅನೇಕ ಸಮೀಕ್ಷೆಗಳು ಹೇಳಿತ್ತು. ಆ ಚುನಾವಣೆಯಲ್ಲಿ ಸಮೀಕ್ಷೆ ಸುಳ್ಳಾಗಿ ಯುಪಿಎ ಮೈತ್ರಿಕೂಟ ಹೆಚ್ಚು ಸ್ಥಾನಗಳಿಸಿ ಮನಮೋಹನ್ ಸಿಂಗ್ ಪ್ರಧಾನಿಯಾದರು. ಆ ಚುನಾವಣೆಯಲ್ಲಿ ಎನ್.ಡಿಎ 189 ಸ್ಥಾನ ಗಳಿಸಿದರೆ ಕಾಂಗ್ರೆಸ್ ಒಂದೇ ಪಕ್ಷ 206 ಸ್ಥಾನ ಗಳಿಸಿತ್ತು.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿಯೂ ಹಿಂದೆ ಇದೇ ರೀತಿಯಾಗಿತ್ತು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆರಲಿದೆ ಎಂದು ಯಾವ ಸಮೀಕ್ಷೆಗಳೂ ಹೇಳಿರಲಿಲ್ಲ. ಆದರೆ ಸಮೀಕ್ಷೆಗಳನ್ನು ಸುಳ್ಳಾಗಿಸಿ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದಿದ್ದರು.
2014ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಗೆ ಬಹುಮತ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಜೆಡಿಯು, ಆರ್ ಜೆಡಿ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬೇಕಾಗಿತ್ತು.
2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಗೆ ಹಿನ್ನಡೆಯಾಗಲಿದೆ ಎಂದೇ ಸಮೀಕ್ಷೆಗಳು ಹೇಳಿತ್ತು. ಆದರೆ 214 ಸ್ಥಾನ ಗಳಿಸಿದ ಟಿಎಂಸಿ ಅಧಿಕಾರಕ್ಕೆ ಬಂದಿತ್ತು.
Post a comment
Log in to write reviews