ಟೆಸ್ಟ್ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ 40 ರನ್ ಗಳಿಂದ ಗೆಲ್ಲುವ ಮೂಲಕ ಎರಡು ಟೆಸ್ಟ್‌ಗಳ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡಿತ್ತು. 2ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಹರಿಣ ಪಡೆ ಸರಣಿಯ ವಶಪಡಿಸಿಕೊಂಡು ದಕ್ಷಿಣ ಆಫ್ರಿಕಾ ವಿಶ್ವದಾಖಲೆ ನಿರ್ಮಿಸಿದೆ. ಟೆಸ್ಟ್‌ಗಳಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು (10) ಸತತ ಸರಣಿ ಜಯಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಹಿಂದೆ ಈ ದಾಖಲೆಯನ್ನು ಟೀಮ್ ಇಂಡಿಯಾ (9) ಮತ್ತು ಆಸ್ಟ್ರೇಲಿಯಾ (9) ಜಂಟಿಯಾಗಿ ಹೊಂದಿದ್ದವು. ಕುತೂಹಲಕಾರಿ ಅಂಶವೆಂದರೆ, ವೆಸ್ಟ್ ಇಂಡೀಸ್ ವಿರುದ್ಧವೇ ಭಾರತ ಮತ್ತು ಆಸ್ಟ್ರೇಲಿಯಾ ಕೂಡ ಈ ದಾಖಲೆಯನ್ನು ಸೃಷ್ಟಿಸಿದ್ದವು.
ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ 33 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ದಕ್ಷಿಣ ಆಫ್ರಿಕಾ ಕೇವಲ ಮೂರು ಪಂದ್ಯಗಳಲ್ಲಿ ಸೋತಿದೆ. 1992ರಲ್ಲಿ ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಸರಣಿಯನ್ನು (ಒಂದು ಪಂದ್ಯ) ದಕ್ಷಿಣ ಆಫ್ರಿಕಾ ಕಳೆದುಕೊಂಡಿತ್ತು. ಆದರೆ, ನಂತರದ 10 ಸರಣಿಗಳನ್ನು ಗೆದ್ದು ವೆಸ್ಟ್ ಇಂಡೀಸ್ ವಿರುದ್ಧ ಪ್ರಾಬಲ್ಯ ಮುಂದುವರಿಸಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ಒಟ್ಟು 24 ಟೆಸ್ಟ್ ಸರಣಿಗಳನ್ನಾಡಿವೆ. ಇದರಲ್ಲಿ ವಿಂಡೀಸ್ 12 ಸರಣಿ ಗೆದ್ದಿದ್ದರೆ, ಭಾರತ 11 ಸರಣಿಗಳನ್ನ ಗೆದ್ದಿದೆ. 2 ಡ್ರಾನಲ್ಲಿ ಅಂತ್ಯಗೊಂಡಿದೆ. ಆದರೆ 2002ರಿಂದ ಭಾರತ ವಿಂಡೀಸ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಆಡಿರುವ ಎಲ್ಲಾ 9 ಸರಣಿಗಳಲ್ಲಿ ಗೆಲುವು ಸಾಧಿಸಿದೆ. 2002ರಿಂದ ಸರಣಿ ಮಾತ್ರವಲ್ಲ, ಭಾರತ ವಿಂಡೀಸ್ ವಿರುದ್ಧ ಒಂದೇ ಒಂದು ಪಂದ್ಯವನ್ನೂ ಕೂಡ ಸೋಲಯ ಕಂಡಿಲ್ಲ.
ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ 29 ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ವೆಸ್ಟ್ ಇಂಡೀಸ್ 8ರಲ್ಲಿ ಗೆಲುವು ಸಾಧಿಸಿದ್ದರೆ, ಆಸ್ಟ್ರೇಲಿಯಾ 18 ಸರಣಿಗಳನ್ನ ಗೆದ್ದಿದೆ. ವೆಸ್ಟ್ ಇಂಡೀಶ್ ಕೊನೆಯ ಬಾರಿ 1992ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದಿದೆ. ಈ ವರ್ಷ ನಡೆದ ಸರಣಿಯನ್ನ ಡ್ರಾ ಮಾಡಿಕೊಳ್ಳುವ ಮೂಲಕ 26 ವರ್ಷಗಳಲ್ಲಿ ಮೊದಲ ಬಾರಿಗೆ ಸರಪಳಿ ಕಳಚಿ ಡ್ರಾ ಸಾಧಿಸಿದೆ.
ಇನ್ನೂ ವಿಂಡೀಶ್ ವಿರುದ್ಧ ಸರಣಿ ಗೆಲ್ಲುವ ಮೂಲಕ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸುವ ಕನಸನ್ನ ದಕ್ಷಿಣ ಆಫ್ರಿಕಾ ಜೀವಂತವಾಗಿರಿಸಿಕೊಂಡಿದೆ. ಅಂಕಪಟ್ಟಿಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದ ಹರಿಣ ಪಡೆ 5ನೇ ಸ್ಥಾನಕ್ಕೇರಿದೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ 68.51 % ಅಂಕವನ್ನು ಹೊಂದಿದೆ. 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 62.50% ಸರಾಸರಿ ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. 2021ರ ಚಾಂಪಿಯನ್ ನ್ಯೂಜಿಲ್ಯಾಂಡ್ 50 ಸರಾಸರಿ ಅಂ
Post a comment
Log in to write reviews