Samayanews.

Samayanews.

2024-11-14 10:54:34

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಶ್ರೀಕೃಷ್ಣಾಷ್ಟಮಿ ಸಂಭ್ರಮ: ಬಾಲಕೃಷ್ಣನಿಗೆ 116 ಬಗೆಯ ನೈವೇದ್ಯ ಬಡಿಸಿದ ಕೃಷ್ಣ ಭಕ್ತೆ

ಮಂಗಳೂರುಪೊಡವಿಗೊಡೆಯ ಉಡುಪಿಯ ಕೃಷ್ಣನಿಗೆ ಕೃಷ್ಣಾಷ್ಟಮಿಗೆ ನೂರಾರು ಬಗೆಯ ಭಕ್ಷ್ಯಗಳನ್ನು ನೈವೇದ್ಯವನ್ನು ಇಟ್ಟು ಆರಾಧಿಸುತ್ತಾರೆ. ಇಷ್ಟು ಬಗೆಯ ತಿಂಡಿಗಳನ್ನು ಮನೆಯಲ್ಲಿ ಮಾಡಿ ಬಡಿಸುವುದು ವಿರಳ. ಆದರೆ, ಮಂಗಳೂರಿನಲ್ಲೊಬ್ಬ ಕೃಷ್ಣಭಕ್ತೆಯೊಬ್ಬರು ಈ ಬಾರಿ 116 ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಬಡಿಸಿ ಕೃಷ್ಣ ಪ್ರೀತಿ ಮೆರೆದಿದ್ದಾರೆ.

ಮಂಗಳೂರಿನ ರಥಬೀದಿಯಲ್ಲಿರುವ ಚಂದ್ರಮತಿ ಎಸ್​. ರಾವ್‌ರವರೇ ಶ್ರೀಕೃಷ್ಣನಿಗೆ ಇಷ್ಟೊಂದು ಬಗೆಯ ನೈವೇದ್ಯ ಬಡಿಸಿದವರು. 66 ವರ್ಷದ ಇವರು ಪ್ರತಿವರ್ಷವೂ ನೂರಾರು ಬಗೆಯ ನೈವೇದ್ಯಗಳನ್ನು ಕೃಷ್ಣನಿಗೆ ಬಡಿಸುತ್ತಾರೆ. ಅದರಂತೆ ಈ ಬಾರಿ ವೈವಿದ್ಯಮಯ ಉಂಡೆ, ಚಕ್ಕುಲಿ, ಕರ್ಜಿಕಾಯಿ, ಚಿರೋಟಿ, ಪೂರಿ, ಜಾಮೂನ್, ಹಲ್ವಾ, ಬಾದುಷಾ, ಬರ್ಫಿ, ಕಜ್ಜಾಯ, ಪಂಚಕಜ್ಜಾಯ, ಚೂಡಾ, ಚಿಪ್ಸ್ ಎಂದು 116 ಬಗೆಯ ನೈವೇದ್ಯಗಳನ್ನು ಬಡಿಸಿದ್ದಾರೆ. ವಾರಗಳಿಂದಲೇ ತಯಾರಿ ಆರಂಭಿಸುವ ಇವರು, ಮಡಿಯಲ್ಲಿದ್ದು, ಶುದ್ಧಾಚರಣೆಯಿಂದಲೇ ಈ ನೈವೇದ್ಯಗಳನ್ನು ತಯಾರಿಸುತ್ತಾರೆ.

ಈ ಬಗ್ಗೆ ಮಾತನಾಡಿದ ಚಂದ್ರಮತಿ ಎಸ್​ ಅವರು 'ಕೃಷ್ಣನೆಂದರೆ ನನಗೆ ಬಹಳ ಪ್ರೀತಿ. ಹಾಗಾಗಿಯೇ ಪ್ರತೀ ವರ್ಷವೂ ಅಷ್ಟಮಿಗೆ ನಾನು ಇಷ್ಟೊಂದು ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಬಡಿಸುತ್ತೇನೆ. ಇಷ್ಟೇ ಐಟಂ ಮಾಡಬೇಕೆಂದು ನಾನು ಮಾಡುವುದಲ್ಲ. ಎಷ್ಟು ನನ್ನಲ್ಲಿ ಸಾಧ್ಯವೋ ಅಷ್ಟು ಭಕ್ಷ್ಯಗಳನ್ನು ಮಾಡುತ್ತೇನೆ. ಇದನ್ನು ನಾನು ಮಾಡುವುದಲ್ಲ. ಆ ಶ್ರೀಕೃಷ್ಣನೇ ನನ್ನಿಂದ ಮಾಡಿಸುವುದು' ಎನ್ನುತ್ತಾರೆ.

ಅಷ್ಟಮಿಯ ದಿನ ರಾತ್ರಿ ಕೃಷ್ಣನಿಗೆ ಈ ನೈವೇದ್ಯ ಬಡಿಸುತ್ತಾರೆ. ಹೆಚ್ಚಿನ ಭಕ್ಷ್ಯಗಳನ್ನು ಸ್ವಲ್ಪವೇ ಮಾಡಲಾಗುತ್ತದೆ. ಆದರೆ ಬಹಳಷ್ಟು ಮಂದಿಗೆ ಅವರು ಅಷ್ಟಮಿಯ ಪ್ರಸಾದ ಹಂಚುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಆದ್ದರಿಂದ ಸುಮಾರು ಏಳೆಂಟು ಬಗೆಯ ಭಕ್ಷ್ಯಗಳನ್ನು ಹೆಚ್ಚಿಗೆ ಮಾಡಿ ಅದನ್ನು ಹಂಚುತ್ತಾರೆ. ಈ ವಯಸ್ಸಿನಲ್ಲೂ ಇಷ್ಟೊಂದು ಬಗೆಯ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯವಾಗಿ ಬಡಿಸುವ ಚಂದ್ರಮತಿಯವರ ಕೃಷ್ಣಪ್ರೀತಿಗೆ ಮೆಚ್ಚಲೇ ಬೇಕಾಗಿದೆ.

img
Author

Post a comment

No Reviews