ಹುಬ್ಬಳ್ಳಿ: ಲವ್ ಜಿಹಾದ್ ವಿರುದ್ಧ ಅಭಿಯಾನ ಆರಂಭಿಸಿದ ಶ್ರೀರಾಮ ಸೇನೆ ಮೇಲೆ ಬಾಂಬ್ ಹಾಕುವ ಹಾಗೂ ಜೀವ ತೆಗೆಯುವ ಬೆದರಿಕೆಗಳು ಕೇಳಿಬರುತ್ತಿವೆ. ಶ್ರೀರಾಮ ಸೇನೆ ಹೆಲ್ಪ್ ಲೈನ್ಗೆ 170ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ಮುಖಂಡ ಗಂಗಾಧರ ಕುಲಕರ್ಣಿ ಗಂಭೀರ ಆರೋಪ ಮಾಡಿದ್ದಾರೆ.
ಲವ್ ಜಿಹಾದ್ ವಿರುದ್ಧ ಸಮರ ಸಾರಿರುವ ಶ್ರೀರಾಮ ಸೇನೆ ಮೇ 29 ರಂದು ಹೆಲ್ಫ್ ಲೈನ್ ಆರಂಭಿಸಿತ್ತು. ಈ ಹೆಲ್ಫ್ ಲೈನ್ಗೆ ಇದುವರೆಗೆ 1000ಕ್ಕೂ ಅಧಿಕ ಕರೆಗಳು ಬಂದಿವೆ. ಇವುಗಳ ಪೈಕಿ 170ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ. ಕಿಡಿಗೇಡಿಗಳು ಇಂಟರ್ನೆಟ್ ಕಾಲ್ ಮೂಲಕ ಜೀವ ಬೆದರಿಕೆ ಹಾಕುತ್ತಿದ್ದಾರೆ. ಜೊತೆಗೆ ಶ್ರೀರಾಮ ಸೇನೆ ಸಂಘಟನೆ ಮುಖಂಡರ ಫೇಸ್ ಬುಕ್ ಅಕೌಂಟ್ ಅನ್ನು ಕೂಡ ಕ್ಲೋಸ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಫೇಸ್ ಬುಕ್ ಬಂದ್ ಆಗಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆರೋಪ ಮಾಡಿದ್ದಾರೆ
Post a comment
Log in to write reviews