Samayanews.

Samayanews.

2024-12-24 12:36:11

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರಾಜ್ಯ ಸರ್ಕಾರ ಕೆಡವಲು ಬಿಜೆಪಿ ಹಾಗೂ ಜೆಡಿಎಸ್ ಷಡ್ಯಂತ್ರ ಚರ್ಚೆ ಸತ್ಯ: ಸಚಿವರ ಸ್ಪಷ್ಟನೆ

ಬೆಂಗಳೂರು(ಆ.24):  ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೆಡವಲು ಬಿಜೆಪಿ ಹಾಗೂ ಜೆಡಿಎಸ್ ಷಡ್ಯಂತ್ರ ನಡೆಸಿರುವ ಬಗ್ಗೆ ಗುರುವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಿರುವುದು ಆದರೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರವನ್ನು ಕೆಡವಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪ್ರತ್ಯೇಕವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ ಹಾಗೂ ಎಂ.ಬಿ. ಪಾಟೀಲ್ ಅವರು, ಈ ಬಗ್ಗೆ ಚರ್ಚೆ ನಡೆದಿದ್ದು ಸತ್ಯ. ಆದರೆ, ಸರ್ಕಾರ ಕೆಡವಿ ಹಾಕುವ ಸಾಮರ್ಥ ಜೆಡಿಎಸ್‌ಗೆ ಇಲ್ಲ ಎಂದರು. 

ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರ ಅಸ್ಥಿರಗೊಳಿಸುವ ಷಡ್ಯಂತ್ರ ಕುರಿತು ಪ್ರಸ್ತಾಪಿಸಿದರು. ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಸರ್ಕಾರವನ್ನು ಬೀಳಿಸಲು ಕನಿಷ್ಠ 60-70 ಮಂದಿ ಕೈ ಶಾಸಕರು ಬಿಜೆಪಿ-ಜೆಡಿಎಸ್ಗೆ ಬೇಕು. ನಮ್ಮಿಂದ ಯಾವೊಬ್ಬ ಶಾಸಕರೂ ಹೋಗಲು ಸಾಧ್ಯವಿಲ್ಲ, ಯತ್ನಿಸಿರುವ ಬಿಜೆಪಿ-ಜೆಡಿಎಸ್ ಪತ್ಯ೦ತ್ರ ಫಲ ನೀಡಲ್ಲ ಎಂದರು' ಎಂದು ಮಾಹಿತಿ ನೀಡಿದರು. 

ಸಿಎಲ್‌ಪಿ ಸಭೆಯಲ್ಲಿ ಸರ್ಕಾರ ಬೀಳಿಸುವ ಷಡ್ಯಂತ್ರದ ಬಗ್ಗೆ ಚರ್ಚೆ ಆಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ, 'ಈ ಪ್ರಯತ್ನ ಆರು ತಿಂಗಳ ಹಳೆಯದ್ದು, ಈಗ ಮತ್ತೆ ಚಾಲ್ತಿಗೆ ಬಂದಿದೆ. ಸರ್ಕಾರ ರಚನೆಯಾದ ಆರು ತಿಂಗಳೂ ಸಹ ನಮ್ಮಲ್ಲಿ 20-30 ಶಾಸಕರು ಗುಂಪಾಗಿ ಹೋಗುತ್ತಾರೆ. ಸರ್ಕಾರ ಬೀಳಲಿದೆ ಎಂಬ ಚರ್ಚೆ ಬಂದಿತ್ತು. ಬಳಿಕ ಆರು ತಿಂಗಳು ಸುಮ್ಮನಾಗಿದ್ದರು. ಇದೀಗ ಮತ್ತೆ ಚಾಲಿಗೆ ಬಂದಿದೆ' ಎಂದರು.

'6 ತಿಂಗಳಲ್ಲಿ ಸರ್ಕಾರ ಅಸ್ಥಿರಗೊಳಿಸುವ ವಚನ ನೀಡಿದ್ದಾರಂತಲ್ಲ?' ಎಂಬ ಪ್ರಶ್ನೆಗೆ, 'ಅಮಿತ್ ಶಾ ಅವರಿಗೆ ಕುಮಾರಸ್ವಾಮಿ, ದೇವೇಗೌಡ ಮಾತು ಕೊಟ್ಟಿದ್ದಾರೆ ಎಂಬುದು ನಿಮ್ಮ ಪ್ರಶ್ನೆ. ಕೊಟ್ಟಿರಬಹುದು, ಇಲ್ಲ ಎಂದು ಹೇಳಲು ಸಾಧ್ಯವಿಲ್ಲ, ಇದು ರಾಜಕೀಯ, ಇಲ್ಲಿ ಏನು ಬೇಕಾದರೂ ಆಗಬಹುದು. ನಾನು ಸಿಎಲ್ ಪಿಯಲ್ಲಿ ನಮ್ಮ ಸರ್ಕಾರದ ಅವಧಿ ಮುಗಿಯು ವವರೆಗೂ ಇದೇ ರೀತಿ ನಡೆಯುತ್ತದೆ ಎಂದೂ ಹೇಳಿದ್ದೇನೆ' ಎಂದು ಸತೀಶ್ ತಿಳಿಸಿದರು.

img
Author

Post a comment

No Reviews