ಚಿಕ್ಕಬಳ್ಳಾಪುರ: ಕಳ್ಳರು ಪೊಲೀಸರ ಹೆಸರು ಬಳಸಿ ಮಹಿಳೆಯ ಮಾಂಗಲ್ಯ ಸರ ಕದ್ದಿರುವ ಘಟನೆ ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಟಲದಿನ್ನೆ ನಿವಾಸಿ ಗಂಗಲಕ್ಷ್ಮಮ್ಮ ತನ್ನ ಮಗಳ ಮನೆಯಿಂದ ಮಧುಗಿರಿ ರಾಷ್ಟ್ರೀಯ ಹೆದ್ದಾರಿ ಮುಖಾಂತರ ಹೊಲದ ಕಡೆಗೆ ನಡೆದುಕೊಂಡು ಹೋಗುತ್ತಿರು ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಕಳ್ಳರು ಪೊಲೀಸರೆಂದು ಹೇಳಿಕೊಂಡು, ಮಹಿಳೆಯನ್ನು ಯಾಮಾರಿಸಿದರು. “ನಾವು ಪೊಲೀಸರು, ಇಷ್ಟೊಂದು ಬಂಗಾರದ ಒಡವೆಗಳನ್ನು ಧರಿಸಬಾರದು” ಎಂದು ಹೇಳಿ, ಅವರ ಕತ್ತಿನಲ್ಲಿದ್ದ 38 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ತೆಗೆಯುವಂತೆ ಹೇಳಿದ್ದಾರೆ. ಸರವನ್ನು ತಗೆದ ನಂತರ ಪೇಪರ್‌ನಲ್ಲಿ ಸುತ್ತಿ ಜೋಪಾನ ಮಾಡುವಂತೆ ನಾಟಕವಾಡಿದ ಕಳ್ಳರು, ಆ ಪೇಪರ್‌ನಲ್ಲಿ ಕಲ್ಲುಗಳನ್ನು ಇಟ್ಟು, ದ್ವಿಚಕ್ರ ವಾಹನದಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎನ್ನಲಾಗದೆ.
ಸ್ಥಳದಿಂದ ಸ್ವಲ್ಪ ದೂರ ಹೋದ ನಂತರ, ಗಂಗಲಕ್ಷ್ಮಮ್ಮ ಅವರಿಗೆ ಅವರ ಮಾಂಗಲ್ಯ ಸರ ಕಳ್ಳತನವಾಗಿರುವುದು ಅರಿವಾದ ನಂತರ ಗಂಗಲಕ್ಷ್ಮಮ್ಮ ಜೊತೆ ಸ್ಥಳೀಯರು ಕೂಡಾ ಬೆನ್ನತ್ತಿದ್ದು. ಕಳ್ಳರು ಕೋಟಾಲದಿನ್ನಿ ಬಳಿ ಕಣ್ಮರೆಯಾದರು.
ಈ ಘಟನೆಗೆ ಸಂಬಂಧಿಸಿದಂತೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪಿಎಸ್ ಐ ರಮೇಶ್ ಗುಗ್ಗರಿ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ. ಕಳ್ಳರನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದು ಕೇವಲ ಒಂದು ಘಟನೆ ಮಾತ್ರವಲ್ಲ, ಕಳೆದ ತಿಂಗಳಲ್ಲಿಯೇ ಇದೇ ರೀತಿಯ ಘಟನೆಯು ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲೂ ನಡೆದಿದ್ದು. ಸದ್ಯ ಘಟನೆಯ ನಂತರ ಸಾರ್ವಜನಿಕರು ಹೆಚ್ಚಿನ ಜಾಗೃತಿಯಿಂದ ಇರಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
Post a comment
Log in to write reviews