ಕರ್ನಾಟಕ
ಗಜಪಡೆಯ ಎರಡು ಆನೆಗಳ ಮಧ್ಯೆ ಸ್ಟ್ರೀಟ್ ಫೈಟ್
ಮೈಸೂರು: ಅರಮನೆ ಆವರಣದಲ್ಲಿ ದಸರಾ ಗಜಪಡೆಯ ಎರಡು ಆನೆಗಳ ಮಧ್ಯೆ ಸ್ಟ್ರೀಟ್ ಫೈಟ್ ನಡೆದಿದೆ. ಊಟ ತಿನ್ನುವಾಗ ಕಂಜಮ್ ಮತ್ತು ಧನಂಜಯ ಆನೆ ನಡುವೆ ಗಲಾಟೆ ನಡೆದು ಕಿತ್ತಾಡಿಕೊಂಡಿವೆ. ಆಕ್ರೋಶಗೊಂಡ ಧನಂಜಯ ಕಂಜನ್‌ನನ್ನ ಅಟ್ಟಾಡಿಸಿದ್ದಾನೆ. ಧನಂಜಯ ಅಟ್ಯಾಕ್ ಮಾಡ್ತಿದ್ದಂತೆ ಬೆದರಿದ ಕಂಜನ್ ಅರಮನೆಯ ಬ್ಯಾರಿಕೇಡ್ ತಳ್ಳಿ ರಸ್ತೆ ಕಡೆ ಓಡಿದ್ದಾನೆ.
ಮಾವುತನಿಲ್ಲದೆ ಅರಮನೆಯಿಂದ ರಸ್ತೆಯತ್ತ ಧಾವಿಸಿದಾಗ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಎರಡೂ ಆನೆಗಳ ಕಾಳಗ ನೋಡಿ ಕಂಗಲಾದ ಕೆಲ ಪ್ರವಾಸಿಗರು, ಅರಮನೆ ಮುಂಭಾಗದಿಂದ ʻಬದುಕಿದ್ರೆ ಸಾಕಪ್ಪʼ ಅಂತಾ ಎದ್ನೋ ಬಿದ್ನೋ ಅಂತಾ ಕಾಲ್ಕಿತ್ತಿದ್ದಾರೆ. ಈ ವೇಳೆ ಕಂಜನ್ ಆನೆ ಮೇಲೆ ಮುಗಿಬಿದ್ದ ಧನಂಜಯ ಆನೆಯನ್ನ ಮಾವುತ ಧೈರ್ಯ, ಸಮಯಪ್ರಜ್ಞೆಯಿಂದ ನಿಯಂತ್ರಿಸಿದ್ದಾನೆ.
ಕೋಪಗೊಂಡಿದ್ದ ಧನಂಜಯ ಆನೆಯನ್ನ ಕಂಟ್ರೋಲ್ ಮಾಡಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನ ಮಾವುತ ತಪ್ಪಿಸಿದ್ದಾನೆ. ಯಾವಾಗ ಧನಂಜಯ ಆನೆ ಅಟ್ಟಾಡಿಸುವುದನ್ನ ನಿಲ್ಲಿಸಿತೋ ʻಬಡ ಜೀವ ಬದುಕಿತುʼ ಅಂತಾ ಕಂಜನ್ ಆನೆ ಸಹ ರಸ್ತೆ ಬದಿ ನಿಂತು ಉಸಿರೆಳೆದುಕೊಂಡಿದೆ. ಆಗ ತಕ್ಷಣ ಆನೆ ಬಳಿ ತೆರಳಿದ ಮಾವುತ, ಕಂಜನ್‌ನ್ನ ಅರಮನೆ ಒಳಗೆ ಕರೆ ತಂದಿದ್ದಾನೆ. ಒಟ್ಟಿನಲ್ಲಿ ಮಾವುತರ ಸಮಯಪ್ರಜ್ಞೆ, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಅಪಾಯವೊಂದು ತಪ್ಪಿದೆ. ಬೆಟ್ಟದಂತೆ ಕಾಣಿಸಿದ ಆನೆಗಳ ʻಸ್ಟ್ರೀಟ್ ಫೈಟ್ʼ ಮಂಜಿನಂತೆ ಕರಗಿ ಎಲ್ಲರೂ ನೆಮ್ಮದಿಯ ನಿಟ್ಡುಸಿರು ಬಿಟ್ಟಿದ್ದಾರೆ.
Post a comment
Log in to write reviews