ನಟ ಸನ್ನಿ ಡಿಯೋಲ್ ಹಣಕಾಸು ವಂಚನೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ದೂರು ದಾಖಲಾಗಿದೆ. ಚಲನಚಿತ್ರ ನಿರ್ಮಾಪಕ ಮತ್ತು ಸಂಡಾನ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ಸೌರವ್ ಗುಪ್ತಾ ಅವರು ಸನ್ನಿ ಡಿಯೋಲ್ ವಿರುದ್ಧ ಈ ಆರೋಪ ಮಾಡಿದ್ದಾರೆ.
ತಮ್ಮ ಸಹಯೋಗದ ಯೋಜನೆಯೊಂದರ ಆರಂಭಿಕ ಮಾತುಕತೆಗೆ ಸಂಬಂಧ ಸುಮಾರು 4 ಕೋಟಿ ರೂಪಾಯಿಗೆ ತಮ್ಮ ಚಿತ್ರದಲ್ಲಿ ನಟಿಸಲು ಸನ್ನಿ ಡಿಯೋಲ್ ಒಪ್ಪಿದ್ದರೆಂದು ಸೌರವ್ ಗುಪ್ತಾ ಹೇಳಿದ್ದಾರೆ. ಆದರೆ, ಈ ಯೋಜನೆಗೆ ಸಂಬಂಧಪಟ್ಟಂತೆ ಸನ್ನಿ ಡಿಯೋಲ್ ಮೋಸ ಮಾಡಿದ್ದಾರೆ. ಸುಮಾರು 2.55 ಕೋಟಿ ಮೊತ್ತದ ವಂಚನೆ ನಡೆದಿದೆ. ಇವರಿಂದ ನನಗೆ 25 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಸೌರವ್ ಗುಪ್ತಾ ಆರೋಪಿಸಿದ್ದಾರೆ.
ಸೌರವ್ ಗುಪ್ತಾ ಅವರು ಸನ್ನಿ ಡಿಯೋಲ್‌ಗೆ ಆರಂಭಿಕ ಮುಂಗಡ ಮೊತ್ತವಾಗಿ 1 ಕೋಟಿ ರೂಪಾಯಿ ಪಾವತಿಸಿದ್ದರು. ನಂತರ ಅಕ್ಟೋಬರ್‌ನಲ್ಲಿ ಮತ್ತೆ 1 ಕೋಟಿ ರೂಪಾಯಿ ನೀಡಿದ್ದರು. ಇಷ್ಟು ಹಣ ನೀಡಿದರೂ ನಿಗದಿತ ಸಿನಿಮಾ ಆರಂಭಕ್ಕೆ ಸನ್ನಿ ಡಿಯೋಲ್ ಯಾವುದೇ ಆಸಕ್ತಿ ತೋರಲಿಲ್ಲ. ನಾವು ಮೊದಲು ಒಂದು ಕೋಟಿ ರೂಪಾಯಿ ನೀಡಿದ್ದೇವು. ಬಳಿಕ ಅಕ್ಟೋಬರ್‌ನಲ್ಲಿ ಮತ್ತೆ ಒಂದು ಕೋಟಿ ಕೇಳಿದಾಗ ಅದನ್ನೂ ನೀಡಿದ್ದೇವೆ ಎಂದು ಗುಪ್ತಾ ಮಾಧ್ಯಮದ ಮುಂದೆ ಹೇಳಿದ್ದಾರೆ.
ಮಗ ಕರಣ್ ಡಿಯೋಲ್ ಮದುವೆಗೆ ಹಣ ಬೇಕು, ಹೀಗಾಗಿ 50 ಲಕ್ಷ ರೂಪಾಯಿ ನೀಡಿ ಎಂದರು. ಸ್ಯಾಟ್‌ಲೈಟ್ ಮತ್ತು ಡಿಜಿಟಲ್ ಸೇಲ್ಸ್ ನಿಂದ ಸಾಕಷ್ಟು ಆದಾಯ ತರುವ ಭರವಸೆಯನ್ನು ಆ ಸಂದರ್ಭದಲ್ಲಿ ನೀಡಿದರು. ಬೇರೇನೂ ಮಾಡಲಾಗದೆ 50 ಲಕ್ಷ ರೂಪಾಯಿ ನೀಡಲಾಯಿತು.
ಚಿತ್ರದ ಒಪ್ಪಂದ ಪತ್ರವನ್ನು ಸನ್ನಿ ಡಿಯೋಲ್ ಬದಲಾಯಿಸಿದ್ದಾರೆ. ತನ್ನ ಸಂಭಾವನೆ 8 ಕೋಟಿ ರೂಪಾಯಿ, ಇಷ್ಟು ಮಾತ್ರವಲ್ಲದೆ ಲಾಭದಲ್ಲಿಯೂ 2 ಕೋಟಿ ರೂಪಾಯಿ ಹೆಚ್ಚುವರಿ ನೀಡಬೇಕೆಂದು ಹೇಳಲಾಗಿತ್ತು. ಇದೇ ಒಪ್ಪಂದದಲ್ಲಿ ಹೆಚ್ಚುವರಿಯಾಗಿ ಒಂದು ಕೋಟಿ ರೂಪಾಯಿ ಪಾವತಿಸಬೇಕೆಂದು ಬರೆಯಾಗಿತ್ತು. ಇದರಿಂದ ವಿಚಲಿತರಾದ ಗುಪ್ತ ನೇರವಾಗಿ ನಟನನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ, ಯಾವುದೇ ಪ್ರತಿಕ್ರಿಯೆ ದೊರಕಲಿಲ್ಲ. ಸನ್ನಿ ಡಿಯೋಲ್‌ರನ್ನು ನಂಬಿ ಈ ಯೋಜನೆಗಾಗಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 25 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ಗುಪ್ತಾ ಹೇಳಿದ್ದಾರೆ. ಇದೀಗ ಸೌರವ್ ಗುಪ್ತಾ ಈ ವಿಷಯಕ್ಕೆ ಸಂಬಂಧಪಟ್ಟಂತೆ ನಟನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ವಿಚಾರಣೆಗೆ ಏಪ್ರಿಲ್ 30ರಂದು ಹಾಜರಾಗುವಂತೆ ಸನ್ನಿ ಡಿಯೋಲ್ಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
Post a comment
Log in to write reviews