ಭಾರತ
ಸುಪ್ರೀಂಕೋರ್ಟ್‌ನ ಯುಟ್ಯೂಬ್ ಚಾನೆಲ್ ಹ್ಯಾಕ್
ಹೊಸದೆಲ್ಲಿ: ಭಾರತದ ಸುಪ್ರೀಂಕೋರ್ಟ್‌ನ ಯುಟ್ಯೂಬ್ ಚಾನೆಲ್‌ನನ್ನು ಹ್ಯಾಕ್ ಮಾಡಲಾಗಿದ್ದು, ಕಲಾಪಗಳನ್ನು ವೀಕ್ಷಿಸಿಸಲು ಚಾನೆಲ್‌ಗೆ ಭೇಟಿಕೊಟ್ಟರೆ ಅಮೆರಿಕದ ರಿಪೆಲ್ ಲ್ಯಾಬಸ್ ಅಭಿವೃದ್ಧಿಪಡಿಸಿದ ಕ್ರಿಪ್ಟೋ ಕರೆನ್ಸಿxrp ಪ್ರಚಾರದ ವೀಡಿಯೋಗಳು ಕಂಡುಬಂದಿದೆ.
ಸಂವಿಧಾನ ಪೀಠಗಳ ಮುಂದೆ ಪಟ್ಟಿ ಮಾಡಲಾದ ಪ್ರಕರಣಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ವಿಷಯಗಳ ವಿಚಾರಣೆಗಳನ್ನು ಸ್ಟ್ರೀಮ್ ಮಾಡಲು ಸುಪ್ರೀಂಕೋರ್ಟ್ ಯುಟ್ಯೂಬ್‌ನನ್ನು ಬಳಸುತ್ತಿದೆ.
ಇತ್ತೀಚೆಗೆ ಆರ್ ಜಿಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅತ್ಯಚಾರ ಮತ್ತು ಕೊಲೆ ಪ್ರಕರಣದ ಮೇಲೆ ಸ್ವಯಂ ಪೇರಿತ ಪ್ರಕರಣದ ವಿಚಾರಣೆಗಳನ್ನು ಯುಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗಿತ್ತು. ಹ್ಯಾಕರ್‌ಗಳು ಈ ಹಿಂದೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿರುವ ಕಲಾಪಗಳ ವಿಡಿಯೋಗಳನ್ನು ಖಾಸಗಿ ಎಂದು ಮಾಡಿದ್ದು ಅದು ಈಗ ಸಾರ್ವಜನಿಕರಿಗೆ ಲಭ್ಯವಿಲ್ಲ. ಚಾನೆಲ್ ವೀಕ್ಷರಿಗೆ ಸಾಧ್ಯವಾಗಬೇಕಾದರೆ 2 ಬಿಲಿಯನ್ ಅಮೆರಿಕ ಡಾಲರ್ ಡಾಂಡಕಟ್ಟಿ ಎಂದು ಸ್ಕ್ರೀನ್ ಮೇಲೆ ಬರುತ್ತಿದೆ.
ಯುಟ್ಯೂಬ್ ಚಾನೆಲ್‌ನ ಹ್ಯಾಕಿಂಗ್ ಬಗ್ಗೆ ಸುಪ್ರೀಂಕೋರ್ಟ್ ಪರಿಶೀಲಿಸುತ್ತಿದೆ ಎಂದು ಅಧಿಕೃತ ಮೂಲಗಳು ಬಾರ್ ಅಂಡ್ ಬ್ರಾಂಚ್ ತಿಳಿಸಿವೆ.
Post a comment
Log in to write reviews