Samayanews.

Samayanews.

2024-11-14 11:09:41

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬ್ರೆಜಿಲ್​ನಲ್ಲಿ 'ಎಕ್ಸ್​' ವೇದಿಕೆ ಅಮಾನತು: ಆದೇಶ ನೀಡಿದ ಸುಪ್ರೀಂ ಕೋರ್ಟ್​

ಸಾವೊ ಪಾಲೊ( ಬ್ರೆಜಿಲ್​): ದೇಶದಲ್ಲಿ ಕಾನೂನು ಪ್ರತಿನಿಧಿಯನ್ನು ನೇಮಿಸಲು ಟೆಸ್ಲಾ ಸಿಇಒ ನಿರಾಕರಿಸಿದ ಹಿನ್ನೆಲೆ ಟೆಕ್​ ಬಿಲಿಯನೇರ್​​ ಎಲೋನ್​ ಮಸ್ಕ್​ ಅವರ ಸಾಮಾಜಿಕ ಜಾಲತಾಣ ಎಕ್ಸ್​ ಅನ್ನು ತನ್ನ ದೇಶದಲ್ಲಿ ಅಮಾನತುಗೊಳಿಸುವಂತೆ ಬ್ರೆಜಿಲ್​ನ ಸುಪ್ರೀಂ ಕೋರ್ಟ್​ ಆದೇಶಿಸಿದೆ ಎನ್ನಲಾಗಿದೆ.

ನ್ಯಾಯಮೂರ್ತಿ ಅಲೆಕ್ಸಾಂಡ್ರೆ ಡಿ ಮೊರೇಸ್​ ಶುಕ್ರವಾರ ಎಕ್ಸ್​ಗೆ ಪ್ರವೇಶವನ್ನು ನಿರ್ಬಂಧಿಸಲು ಇಂಟರ್ನೆಟ್​ ಸೇವಾ ಪೂರೈಕೆದಾರರು ಹಾಗೂ ಅಪ್ಲಿಕೇಶನ್​ ಸ್ಟೋರ್​ಗಳಿಗೆ ಐದು ದಿನಗಳ ಕಾಲಾವಕಾಶ ನೀಡಿದರು. ಹಾಗೂ ತನ್ನ ಆದೇಶಗಳನ್ನು ಪಾಲಿಸುವವರೆಗೆ ಎಕ್ಸ್​ ಫ್ಲಾಟ್​ಫಾರ್ಮ್​ ಅನ್ನು ನಿರ್ಬಂಧಿಸಲಾಗಿದ್ದು, ಜೊತೆಗೆ ಎಕ್ಸ್​ ಅನ್ನು ಪ್ರವೇಶಿಸಲು ವರ್ಚುಯಲ್​ ಖಾಸಗಿ ನೆಟ್​ವರ್ಕ್​ಗಳು ಅಥವಾ ವಿಪಿಎನ್​ಗಳನ್ನು ಬಳಸುವ ಜನರು ಅಥವಾ ಕಂಪನಿಗಳಿಗೆ ದೈನಂದಿನ 50,000 ರಿಯಾಸ್​ ದಂಡ ವಿಧಿಸಲಾಗುವುದು ಎಂದು ಹೇಳಿದರು. ಈ ಕ್ರಮವು ಸಾರ್ವಜನಿಕರ ಅಭಿಪ್ರಾಯವನ್ನು ಕೆರಳಿಸುವ ಸಾಧ್ಯತೆಯಿದೆ. ಏಕೆಂದರೆ 20 ಮಿಲಿಯನ್​ ಬ್ರೆಜಿಲಿಯನ್ನರು ನಿಯಮಿತವಾಗಿ ಎಕ್ಸ್​ ವೇದಿಕೆಯನ್ನು ಬಳಸುತ್ತಿದ್ದಾರೆ.

ಜಸ್ಟಿಸ್​ ಅಲೆಕ್ಸಾಂಡ್ರೆ ಡಿ ಮೊರೇಸ್​ ಬುಧವಾರ ರಾತ್ರಿ, ಮಸ್ಕ್​ ಅವರು ಪ್ರತಿನಿಧಿಯನ್ನು ನೇಮಿಸುವ ತನ್ನ ಆದೇಶವನ್ನು ಅನುಸರಿಸಲು ವಿಫಲವಾದರೆ ಬ್ರೆಜಿಲ್​ನಲ್ಲಿ ಎಕ್ಸ್​ ವೇದಿಕೆಯನ್ನು ನಿರ್ಬಂಧಿಸಲಾಗುವುದು ಎಂದು ಎಚ್ಚರಿಸಿದ್ದರು. ಜೊತೆಗೆ 24 ಗಂಟೆಗಳ ಗಡುವನ್ನು ಕೂಡಾ ನೀಡಿದ್ದರು. ಆಗಸ್ಟ್​ ತಿಂಗಳ ಆರಂಭದಿಂದಲೂ ಸಾಮಾಜಿಕ ಮಾಧ್ಯಮ ವೇದಿಕೆಯು ತನ್ನ ಸ್ಥಳೀಯ ಪ್ರತಿನಿಧಿಗಳಿಲ್ಲದೆಯೇ ಇದೆ. ಎಚ್ಚರಿಕೆಯ ನಂತರವೂ ಮಸ್ಕ್​ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ.

ಬ್ರೆಜಿಲ್​ನ ಸಾರ್ವಭೌಮತ್ವ ಮತ್ತು ನ್ಯಾಯಾಂಗವನ್ನು ಕಡೆಗಣಿಸಿದ್ದಕ್ಕಾಗಿ ಮಸ್ಕ್​ ಅವರನ್ನು ಟೀಕಿಸಿದ ಡಿ ಮೊರೇಸ್​, ರಾಷ್ಟ್ರೀಯ ಕಾನೂನುಗಳ ಮೇಲೆ ತನ್ನನ್ನು ತಾನು ಸ್ಥಾನಿಕಗೊಳಿಸಿಕೊಂಡಿದ್ದಾನೆ ಎಂದು ವಿವರಿಸಿದರು.

2022ರಲ್ಲಿ ಮಸ್ಕ್ ಹಿಂದಿನ ಟ್ವಿಟರ್ ಅನ್ನು ಖರೀದಿಸಿದಾಗಿನಿಂದ ಜಾಹೀರಾತುದಾರರ ನಷ್ಟದೊಂದಿಗೆ ಹೆಣಗಾಡುತ್ತಿದ್ದ ಈಗಿನ ಎಕ್ಸ್​ಗೆ ಬ್ರೆಜಿಲ್ ಪ್ರಮುಖ ಮಾರುಕಟ್ಟೆಯಾಗಿದೆ.​ ಮಾರುಕಟ್ಟೆ ಸಂಶೋಧನಾ ಗುಂಪು ಎಮಾರ್ಕೆಟರ್ ಪ್ರಕಾರ, ಸುಮಾರು 40 ಮಿಲಿಯನ್ ಬ್ರೆಜಿಲಿಯನ್ನರು, ಜನಸಂಖ್ಯೆಯ ಸರಿಸುಮಾರು ಐದನೇ ಒಂದು ಭಾಗ, ತಿಂಗಳಿಗೆ ಒಮ್ಮೆಯಾದರೂ X ಅನ್ನು ಬಳಕೆ ಮಾಡುತ್ತಾರೆ.

 

 

img
Author

Post a comment

No Reviews