ಕಿಂಗ್‌ಸ್ಟೌನ್ : ನೇಪಾಳ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಾಂಗ್ಲಾ ತಂಡ ಟಿ 20 ವಿಶ್ವಕಪ್ ಟೂರ್ನಿಯ ಸೂಪರ್ - 8 ಹಂತಕ್ಕೆ ತಲುಪಿದೆ.
ಅರ್ನೋಸ್ ವೇಲ್ ಮೈದಾನದಲ್ಲಿ ಇಂದು ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಡಿ ಗುಂಪಿನ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ, ನೇಪಾಳ ವಿರುದ್ಧ 21 ರನ್‌ಳ ಜಯ ದಾಖಲಿಸಿದೆ. ಇದರೊಂದಿಗೆ ಬಾಂಗ್ಲಾ ಅಧಿಕೃತವಾಗಿ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಶಕಿಬ್ ಉಲ್ ಹಸನ್ ಇನ್ನಿಂಗ್ಸ್‌ನ ಸರ್ವಾಧಿಕ 17 ರನ್ ಗಳಿಸಿದರು. ಇನ್ನುಳಿದಂತೆ ಆರಂಭಿಕ ಆಟಗಾರ ಲಿಟನ್ ದಾಸ್ 10, ಮೊಹಮುದುಲ್ಲಾ 13, ಜಕರ್ ಅಲಿ 12, ರಿಶದ್ ಹೊಸೇನ್ 13 ಹಾಗೂ ವೇಗಿ ಟಸ್ಕಿನ್ ಅಹ್ಮದ್ 12 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಆರಂಭಿಕ ಆಟಗಾರ ತಂಜಿದ್ ಹಸನ್ (0) ಖಾತೆ ತೆರೆಯದೇ ಔಟಾದರೆ, ನಾಯಕ ಶಾಂಟೊ 4, ತೊವ್ಹಿದ್ ಹೃದೋಯ್ 9, ಹಸನ್ ಶಕೀಬ್ 3 ಹಾಗೂ ಮುಸ್ತಾಫಿಜರ್ 3 ರನ್‌ಗೆ ವಿಕೆಟ್ ಒಪ್ಪಿಸಿದರು. ಬಾಂಗ್ಲಾದೇಶ 19.3 ಓವರ್ಗಳಲ್ಲೇ 106 ರನ್‌ಗಳಿಗೆ ಆಲೌಟ್ ಆಯಿತು. ನೇಪಾಳ ಪರ ಸೋಂಪಾಲ್ ಕಾಮಿ, ದಿಪೆಂದ್ರ ಸಿಂಗ್, ರೋಹಿತ್ ಪೌಡೆಲ್ ಹಾಗೂ ಸಂದೀಪ್ ಲಮಿಶಾನೆ ತಲಾ 2 ವಿಕೆಟ್ ಕಬಳಿಸಿದರು.
Post a comment
Log in to write reviews