Samayanews.

Samayanews.

2024-11-15 07:07:37

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಥಿಯೇಟರ್‌ನಲ್ಲಿ ಪ್ರೀ ವೆಡ್ಡಿಂಗ್‌ ಶೂಟ್‌ ಮಾಡಿಸಿದ ತರುಣ್‌ ಸುಧೀರ್‌ ಮತ್ತು ಸೋನಾಲ್‌

ಬೆಂಗಳೂರು: ಸಾಮಾನ್ಯವಾಗಿ ಪ್ರೀ ವೆಡ್ಡಿಂಗ್‌ ಅಂದರೆ ಜನರು ಸಿನಿಮಾ ಸ್ಟೈಲ್‌ನಲ್ಲಿ ಇರಬೇಕು ಎಂದು ಸಿನಿಮ್ಯಾಟಿಕ್‌ ಆಗಿ ಶೂಟ್‌ ಮಾಡ್ತಾರೆ. ಆದರೆ ತರುಣ್‌ ಮತ್ತು ಸೋನಾಲ್‌ ಇಬ್ಬರೂ ಸಿನಿಮಾದವರೇ ಆಗಿರುವುದರಿಂದ ಬೇರೆ ಸ್ಟೈಲ್‌ನಲ್ಲಿ ಇರಲಿ ಎಂದು ಥಿಯೇಟರ್‌ನಲ್ಲಿ ಶೂಟ್‌ ಮಾಡಿದ್ದಾರೆ.

ಪ್ರತಿ ಸಿನಿಮಾದಲ್ಲಿಯೂ ತಮ್ಮ ಕ್ರಿಯೆಟಿವಿಟಿ ಮೂಲಕ ಪ್ರೇಕ್ಷಕರ ಮುಂದೆ ಹೊಸ ಹೊಸ ಕಥೆ ತರುವ ನಿರ್ದೇಶಕ ತರುಣ್ ಸುಧೀರ್ ಈಗ ತಮ್ಮ ಜೀವನದ ರಿಯಲ್ ನಾಯಕಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಆಗಸ್ಟ್ 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಫ್ಯಾಲೆಸ್ ನಲ್ಲಿ ವಿವಾಹ ಜರುಗಲಿದೆ.

ತರುಣ್ ಸುಧೀರ್ ಮತ್ತು ಸೋನಾಲ್ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಈ ವಿಚಾರವನ್ನ ಬ್ಯೂಟಿಫುಲ್ ಆಗಿರುವ ವಿಡಿಯೋ ಮೂಲಕ ತಿಳಿಸುತ್ತಿದ್ದಾರೆ. ತರುಣ್ ಮತ್ತು ಸೋನಾಲ್ ಇಬ್ಬರು ಸಿನಿಮಾ ಇಂಡಸ್ಟ್ರೀಯವರೇ ಆಗಿರೋದ್ರಿಂದ ತಮ್ಮ ಪ್ರೀವೆಂಡಿಂಗ್ ವಿಡಿಯೋವನ್ನ ಥಿಯೇಟರ್ ನಲ್ಲಿಯೇ ಶೂಟ್ ಮಾಡಿದ್ದಾರೆ.

ನಿರ್ದೇಶಕ ತರುಣ್ ಚಿಕ್ಕ ವಯಸ್ಸಿನಿಂದಲೂ ನವರಂಗ್ ಥಿಯೇಟರ್ ನಲ್ಲಿ ಸಿನಿಮಾಗಳನ್ನ ನೋಡಿಕೊಂಡು ಬಂದವರು, ಈಗ ತಮ್ಮ ನಿರ್ದೇಶನದ ಸಿನಿಮಾಗಳು ನವರಂಗ್ ಥಿಯೇಟರ್ ನಲ್ಲಿ ಶತದಿನೋತ್ಸವ ಪೂರೈಸಿವೆ. ಹಾಗಾಗಿ ನವರಂಗ್ ಥಿಯೇಟರ್‌ನಲ್ಲೇ ತಮ್ಮ ಪ್ರೀವೆಂಡ್ಡಿಂಗ್ ಶೂಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಇನ್ನು ಪ್ರೀವೆಡ್ಡಿಂಗ್ ಶೂಟ್‌ನಲ್ಲಿ ತರುಣ್ ಮತ್ತು ಸೋನಾಲ್ ಬ್ಲಾಕ್ ಅಂಡ್ ಬ್ಲಾಕ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತರುಣ್ ಅವರಿಗೆ ಡಿಸೈನರ್ ಚೇತನ್ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದು ಸೋನಾಲ್ ಅವ್ರಿಗೆ ರಶ್ಮಿ ಅವ್ರು ಡಿಸೈನ್ ಮಾಡಿದ್ದಾರೆ. ಸದ್ಯ ತರುಣ್ ಮತ್ತು ಸೋನಾಲ್ ಮದುವೆ ಸಂಭ್ರಮ ಜೋರಾಗಿದ್ದು ಇಷ್ಟು ದಿನ ಹೀರೋಯಿನ್ ಮತ್ತು ಡೈರೆಕ್ಟರ್ ಆಗಿದ್ದ ಸೋನಾಲ್ ಮತ್ತು ತರುಣ್ ಇನ್ನು ಕೆಲವೇ ದಿನಗಳಲ್ಲಿ ಸತಿ-ಪತಿಗಳಾಗಿ ಜೀವನ ಶುರು ಮಾಡಲಿದ್ದಾರೆ.

img
Author

Post a comment

No Reviews