ಬೆಳಗಾವಿ: ಬೆಳಗಾವಿಯ ತೋಟಗಾರಿಕೆ ಇಲಾಖೆಯಲ್ಲಿ ಭಾರಿ ಹಗರಣ ನಡೆದಿದೆ. ಗ್ರೀನ್ ಶೆಡ್ ಸಬ್ಸಿಡಿ ಹಣವನ್ನು ಅಧಿಕಾರಿಗಳು ತಿಂದು ತೇಗಿದ್ದಾರೆ. ತೋಟಗಾರಿಕೆ ಇಲಾಖೆಯ ವತಿಯಿಂದ ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ನೇರವಾಗಲಿ ಅಂತ ಸರ್ಕಾರ 50ಲಕ್ಷ ರೂಪಾಯಿ ವೆಚ್ಚದ ಗ್ರೀನ್ ಶೇಡ್ ನಿರ್ಮಾಣಕ್ಕೆ 25 ಲಕ್ಷ ಸಬ್ಸಿಡಿ ಸೌಲಭ್ಯ ಇದೆ. ಆದರೆ ಇಲ್ಲಿನ ಅಧಿಕಾರಿಗಳು ಫಲಾನುಭವಿಗಳ ಬಳಿ ಚೆಕ್ ಹಾಗೂ ರಿಜಿಸ್ಟರ್‌ಗೆ ಸಹಿ ಹಾಕಿಸಿಕೊಂಡು ಚೆಕ್ ಕೊಡದೇ ಆ ಹಣವನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ ಎಂದು ಫಲಾನುಭವಿಗಳಾದ ಸಿದ್ದಪ್ಪ, ಕಲ್ಲಪ್ಪ, ಬಸವಂತ, ಭೀಮಪ್ಪ ಭಜಂತ್ರಿ ಹಾಗೂ ಪ್ರಕಾಶ್ ಕಲ್ಲಪ್ಪ ಮಾಂಗ್ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.
ಈ ಪ್ರಕರಣದಲ್ಲಿ ರವೀಂದ್ರ, ಬಾಳಪ್ಪ, ಹಕ್ಕಟೆ, ಮಾರುತಿ.ಆರ್, ಕಳ್ಳಿಮನಿ, ಅಶೋಕ್, ಕರಿಯಪ್ಪಗೋಳ, ಶಿವಾನಂದ, ಶಿವಸುದ್ದಿ ಈ ಎಲ್ಲಾ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ರೈತರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಂತಹ ಭ್ರಷ್ಟ ಅಧಿಕಾರಿಗಳನನ್ನು ಕೂಡಲೇ ಅಮಾನತ್ತು ಮಾಡಿ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟಣೆಯ ರಾಜ್ಯಾಧ್ಯಕ್ಷರಾದ ಫಯಾಜ್ ಶರಣೆಗೌಡ ದೊಡ್ಡಮನಿ ಹಾಗೂ ರಮೇಶ್ ಲಮಾಣಿ ಹಾಗೂ ಕುರುಬೂರು ಶಾಂತಕುಮಾರ್ ಸೇರಿದಂತೆ ಹಲವಾರು ರೈತರು ಆಗ್ರಹಿಸಿದ್ದಾರೆ. ಆದಷ್ಟು ಬೇಗ ಫಲಾನುಭವಿಗಳ ಹಣವನ್ನು ಪಾವತಿ ಮಾಡಬೇಕು ಇಲ್ಲದಿದ್ದರೆ ರಾಜಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Post a comment
Log in to write reviews