ಬ್ಯಾಂಕಾಕ್: ಪ್ರವಾಸಕ್ಕೆ ತೆರಳಿದ್ದ ಬಸ್ಸಿಗೆ ಬೆಂಕಿ ಹೊತ್ತಿಕೊಂಡು 25 ಶಾಲಾ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬ್ಯಾಂಕಾಕ್ನಲ್ಲಿ ಮಂಗಳವಾರದಂದು ನಡೆದಿದೆ ಎನ್ನಲಾಗಿದೆ.
ಶಾಲಾ ಪ್ರವಾಸಕ್ಕೆಂದು ಉತೈ ಥಾನಿ ಪ್ರಾಂತ್ಯದಿಂದ ಅಯುತಾಯಕ್ಕೆ ಹೋಗುತ್ತಿದ್ದಾಗ ರಾಜಧಾನಿ ಬ್ಯಾಂಕಾಕ್ನ ಪಥುಮ್ ಥಾನಿ ಪ್ರಾಂತ್ಯದಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಶಿಕ್ಷಕರು ಸೇರಿ 44 ಮಂದಿ ಇದ್ದರು. 19 ವಿದ್ಯಾರ್ಥಿಗಳು ಬಸ್ಸಿನಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ. ಇನ್ನುಳಿದ 25 ವಿದ್ಯಾರ್ಥಿಗಳು ಬೆಂಕಿಗೆ ಸಿಲುಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಇಡೀ ಬಸ್ ಸುಟ್ಟು ಕರಕಲಾಗಿದ್ದರ ಪರಿಣಾಮದಿಂದ ಶವಗಳು ಕೂಡ ಗುರುತು ಪತ್ತೆ ಮಾಡಲು ಸಾಧ್ಯವಾಗದಷ್ಟು ಬೆಂದು ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ಸಿಗೆ ಬೆಂಕಿ ಹೊತ್ತಿಕೊಂಡ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಬಸ್‌ಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವೆಂದರೆ ಬಸ್ ಚಲಿಸುತ್ತಿದ್ದಾಗ, ಒಂದು ಟಯರ್ ಸ್ಫೋಟಗೊಂಡು ರಸ್ತೆಯ ತಡೆಗೋಡೆಗೆ ವಾಹನ ಉಜ್ಜಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ರಕ್ಷಣಾ ತಂಡಗಳು ಸದ್ಯಕ್ಕೆ 10 ಶವಗಳನ್ನು ಬಸ್ಸಿನಿಂದ ಹೊರತೆಗೆದಿದ್ದಾರೆ ಎಂಬ ಮಾಹಿತಿ ದೊರೆತಿದೆ.
Post a comment
Log in to write reviews