ಬೆಂಗಳೂರು: ದಾರಿ ಬಿಡುವ ವಿಚಾರವಾಗಿ ಬೈಕ್ ಮತ್ತು ಕಾರು ಚಾಲಕನ ಮಧ್ಯೆ ಜಗಳ ನಡೆದಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಕ್ಕೂರಿನಲ್ಲಿ ಯೂ ಟರ್ನ್ ಮಾಡುವ ವೇಳೆ ಕಾರು ಚಾಲಕ ಪ್ರವೀಣ್ ಹಾಗೂ ದ್ವಿಚಕ್ರ ವಾಹನ ಸವಾರನ ನಡುವೆ ಗಲಾಟೆ ನಡೆದಿದೆ.
ಈ ವೇಳೆ ಕಾರನ್ನು ಅಡ್ಡ ಹಾಕಿ ಕಾರ್ನ ಬಾನೆಟ್ಗೆ ಒದ್ದು ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಹಿಂಬಾಲಿಸಿ ಬಂದಿದ್ದ ದ್ವಿಚಕ್ರ ವಾಹನ ಸವಾರ ಶ್ರೀರಾಮಪುರದ ಬಳಿಯೂ ಜಗಳ ಮಾಡಿದ್ದಾನೆ. ಕಾರಿನ ಡ್ಯಾಶ್ ಬೋರ್ಡ್ ಕ್ಯಾಮಾರದಲ್ಲಿ ಈ ಘಟನೆ ಸೆರೆಯಾಗಿದೆ. ಘಟನೆಯ ಸಂಬಂಧಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಾರ್ ಚಾಲಕ ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈ ಸಂಬಂಧ ಉತ್ತರಿಸಿರುವ ಪೊಲೀಸರು, ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
Post a comment
Log in to write reviews