ಮಂಡ್ಯ : ಕಾವೇರಿ ಜಲಾಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಕೆಆರ್‌ಎಸ್ ಡ್ಯಾಮ್‌ನ ನೀರಿನ ಮಟ್ಟ ಏರಿಕೆಯಾಗಿದೆ.
ಕರುನಾಡಿನಲ್ಲಿ ಮುಂಗಾರು ಆರ್ಭಟ ಮುಂದುವರೆದಿದ್ದು ಮೂರ್ನಾಲ್ಕು ದಿನಗಳಿಂದ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮತ್ತೊಂದೆಡೆ ರಾಜ್ಯದ ಜಲಾಶಯ, ಜಲಪಾತಗಳಿಗೆ ಜೀವ ಕಳೆ ಬಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲು ವ್ಯಾಪಕ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಡ್ಯಾಮ್‌ನ ನೀರಿನ ಮಟ್ಟ ಏರಿಕೆಯಾಗಿದೆ.
ಕೃಷ್ಣರಾಜ ಸಾಗರ 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಅಣೆಕಟ್ಟಾಗಿದೆ. ನಿರಂತರ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಮ್ ನೀರಿನ ಮಟ್ಟ 105.40 ಅಡಿಗೆ ಏರಿಕೆ ಕಂಡಿದೆ. ಇನ್ನು ಕೇರಳ, ಕೊಡಗು ಭಾಗದಲ್ಲಿ ಈ ವಾರ ಭಾರೀ ಮಳೆ ಆಗಲಿದ್ದು, ಕೆಆರ್‌ಎಸ್ ಗೆ ಹೆಚ್ಚಿನ ನೀರು ಹರಿದು ಬರುವ ನಿರೀಕ್ಷೆಯಿದೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ :
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 105.40 ಅಡಿ
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
ಇಂದಿನ ಸಾಮರ್ಥ್ಯ – 27.347 ಟಿಎಂಸಿ
ಒಳ ಹರಿವು – 10,121 ಕ್ಯೂಸೆಕ್
ಹೊರ ಹರಿವು – 2,260 ಕ್ಯೂಸೆಕ್
Post a comment
Log in to write reviews