ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದು ಬರ್ತಿದ್ದ ನದಿ ನೀರುನ್ನು ಮಹಾರಾಷ್ಟ್ರ ಸರ್ಕಾರ ತಡೆಹಿಡಿದಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿರುವ ರಾಜಾಪುರ ಬ್ಯಾರೇಜ್ ಬಳಿ ನಾಲ್ವರು ಸಿಬ್ಬಂದಿಗಳನ್ನು ಇಬ್ಬರು ಪೊಲೀಸ್ ಇಲಾಖೆ ಸಿಬ್ಬಂದಿ, ನೀರಾವರಿ ಇಲಾಖೆಯ ನಾಲ್ವರು ಸಿಬ್ಬಂದಿಯ ಎರಡು ಗಸ್ತು ತಂಡ ನೇಮಕ ಮಾಡಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳಲ್ಲಿ ಹರಿದು ಹೋಗುವ ಕೃಷ್ಣಾ ನದಿ ನೀರನ್ನ ಮಹಾರಾಷ್ಟ್ರ ತಡೆಹಿಡಿದಿದೆ. ಈ ಬಗ್ಗೆ ಸ್ಥಳೀಯ ಶಾಸಕ ರಾಜೂ ಕಾಗೆ ಮಾನವೀಯತೆ ದೃಷ್ಟಿಯಿಂದ ಮಹಾರಾಷ್ಟ್ರ ಸಕಾ೯ರ ನೀರು ಹಾರಿಸಬೇಕಿತ್ತು. ಆದರೆ, ಅವರು ಹಾಗೆ ಮಾಡಿಲ್ಲ. ಮಹಾರಾಷ್ಟ್ರ ದಿಂದ ನೀರು ಬಿಡಗಡೆ ವಿಚಾರವಾಗಿ ಒಂದು ಅಗ್ರಿಮೆಂಟ್ ಬಾಕಿ ಇದೆ ಆ ಒಂದು ಅಗ್ರಿಮೆಂಟ್ ಆದರೆ ಎಲ್ಲಾವೂ ಸರಿ ಹೋಗುತ್ತೆ ಎಂದು ನಮ್ಮ ಸಮಯ ನ್ಯೂಸ್ ಪ್ರತಿನಿಧಿ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.
Post a comment
Log in to write reviews