ಬೆಂಗಳೂರು : ಕಿರಣ್ ಅವರ ರಾವ್ ನಿರ್ದೇಶಿರುವ ‘ಲಾಪತಾ ಲೇಡೀಸ್’ ಚಿತ್ರ (Laapataa Ladies) ಆಗಸ್ಟ್ 9 ರಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಪ್ರದರ್ಶನದ ವೇಳೆ ನಿರ್ದೇಶಕರು ಹಾಗೂ ನಿರ್ಮಾಪಕ ಆಮೀರ್ ಖಾನ್ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿದು ಬಂದಿದೆ.
ಮಾಹಿತಿಯ ಪ್ರಕಾರ ಭಾರತದ ಮುಖ್ಯ ನ್ಯಾಯಾಧೀಶರು ಸಹ ಹಾಜರಿರುತ್ತಾರೆ. ಸಂಜೆ 4:15 ರಿಂದ 6:20 ರವರೆಗೆ ನ್ಯಾಯಾಲಯದ ಸಮಯದ ನಂತರ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ ಎಂದು ತಿಳಿದು ಬಂದಿದೆ. ನಂತರ ಆಮೀರ್ ಖಾನ್ ಮತ್ತು ಕಿರಣ್ ರಾವ್ ಅವರೊಂದಿಗೆ ಸಂವಾದ ನಡೆಯಲಿದೆ.
ಲಿಂಗ ಸಮಾನತೆಯ ವಿಷಯವನ್ನು ಆಧರಿಸಿದ ‘ಲಾಪತಾ ಲೇಡೀಸ್’ ಚಲನಚಿತ್ರವನ್ನು ಶುಕ್ರವಾರ, 9 ರಂದು ಪ್ರದರ್ಶಿಸಲಾಗುವುದು ಎಂದು ನೋಟಿಸ್‌ನಲ್ಲಿ ಉಲ್ಲೇಖವಾಗಿದೆ.
ಆಮೀರ್ ಖಾನ್ ಪ್ರೊಡಕ್ಷನ್ (APK) ಮತ್ತು ಕಿರಣ್ ಅವರ ಕಿಂಡ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ʻಲಾಪತಾ ಲೇಡೀಸ್ʼ (Laapataa Ladies) ಇತ್ತೀಚೆಗೆ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. 14 ವರ್ಷಗಳ ಬ್ರೇಕ್ ನಂತರ ಚಿತ್ರವನ್ನು ನಿರ್ದೇಶಿಸಿದ್ದಾರೆ ಕಿರಣ್. ಸಿನಿಮಾ ಬಗ್ಗೆ ಮೆಚ್ಚುಗೆ ಕೇಳಿಬಂದಿದ್ದರೂ ಕೂಡ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಈ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಿರಲಿಲ್ಲ. . ಸ್ನೇಹಾ ದೇಸಾಯಿ ಬರೆದು ಆಮೀರ್ ಖಾನ್ ನಿರ್ಮಿಸಿದ ‘ಲಾಪತಾ ಲೇಡೀಸ್’ ಬಿಪ್ಲಬ್ ಗೋಸ್ವಾಮಿಯವರ ಕಾದಂಬರಿಯನ್ನು ಆಧರಿಸಿದೆ. ಮಾರ್ಚ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.ಮಹಿಳಾ ಪ್ರಧಾನ ವಸ್ತುವಿಷಯವನ್ನು ‘ಲಾಪತಾ ಲೇಡೀಸ್’ ಚಿತ್ರದಲ್ಲಿದೆ. ಗಂಭೀರವಾದ ವಿಷಯವಾದರೂ ಕೂಡ ಇಡೀ ಸಿನಿಮಾವನ್ನು ಹಾಸ್ಯದ ಧಾಟಿಯಲ್ಲಿ ಕಟ್ಟಿಕೊಡಲಾಗಿದೆ. ಎಮೋಷನಲ್ ದೃಶ್ಯಗಳು ಕೂಡ ಈ ಚಿತ್ರದಲ್ಲಿ ಗಮನ ಸೆಳೆದಿವೆ.
ಲಾಪತಾ ಲೇಡೀಸ್’ ಚಿತ್ರವನ್ನು ಕಿರಣ್ ರಾವ್ ಅವರು ನಿರ್ದೇಶಿಸಿದ್ದಾರೆ. ಆಮೀರ್ ಖಾನ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರವಿ ಕಿಶನ್ ಜತೆಗೆ ನಿತಾಂಶಿ ಗೋಯೆಲ್, ಪ್ರತಿಭಾ ರಂತ, ಸ್ಪರ್ಶ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ನೇಹಾ ದೇಸಾಯಿ ಬರೆದಿದ್ದು. ಇದೀಗ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಇದೆ.
Post a comment
Log in to write reviews