ತಪ್ಪಾಗಿ ಖಾತೆಗೆ ಜಮೆಯಾದ 1 ಕೋಟಿ ರೂಪಾಯಿಯನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಅರ್ಚಕರು
ಉತ್ತರಪ್ರದೇಶ: ಖಾತೆಗೆ ತಪ್ಪಾಗಿ ಜಮೆಯಾದ ಬರೋಬ್ಬರಿ ಒಂದು ಕೋಟಿ ರೂಪಾಯಿಗಳನ್ನು ಅರ್ಚಕರೊಬ್ಬರು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರ ಎಂಬಲ್ಲಿ ಬೆಳಕಿಗೆ ಬಂದಿದೆ. ಉಮೇಶ್ ಶುಕ್ಲಾ ಅವರ ಮನಿ ಕಾಪಿಟಲ್ ಲಿಮಿಟೆಡ್ ಕಂಪನಿಯಿಂದ ಶ್ರೀ ಮಾ ವಿಂದ್ಯಾವಾಸಿನಿ ಸೇವಾ ಸಮಿತಿ ಸಂಸ್ಥಾನ ಖಾತೆಗೆ ಇಷ್ಟು ದೊಡ್ಡ ಮೊತ್ತದ ಹಣ ಜಮೆಯಾಗಿತ್ತು.
ತಮ್ಮ ಖಾತೆಯಲ್ಲಿ 1,48,50,047 ರೂ. ಭಾರೀ ಮೊತ್ತದ ಹಣ ಜಮೆಯಾಗಿರುವ ಬಗ್ಗೆ ಅರ್ಚಕರರಾದ ಮೋಹಿತ್ ಮಿಶ್ರಾ ಅವರ ಮೊಬೈಲ್ಗೆ ಸಂದೇಶ ಬಂದಿದ್ದು, ಸಂದೇಶ ತಿಳಿದು ಆಶ್ಚರ್ಯವಾಗಿದ್ದಲ್ಲದೆ, ಇಷ್ಟು ದೊಡ್ಡ ಮೊತ್ತದ ಹಣ ತಮ್ಮ ಖಾತೆಗೆ ಹಾಕಿದ್ಯಾರು? ಎಂಬ ಪ್ರಶ್ನೆ ಅರ್ಚಕರಾದ ಮೋಹಿತ್ ಮಿಶ್ರಾ ಅವರನ್ನು ಕಾಡಿತ್ತು ಮತ್ತು ಚಿಂತೆಗೆ ಬಿದ್ದ ಅವರು ಅಫಾತಕ್ಕೂ ಒಳಗಾದರು.
ತಪ್ಪಾಗಿ ಮಿಶ್ರಾ ಖಾತೆಗೆ ಹಣ ಜಮೆ ಮಾಡಿದ್ದ ಉಮೇಶ್ ಶುಕ್ಲಾ: ಹೀಗೆ ಹಣದ ಮೂಲದ ತಡಕಾಟದಲ್ಲಿದ್ದ ಅರ್ಚಕ ಮೋಹಿತ್ ಮಿಶ್ರಾಗೆ ಉಮೇಶ್ ಶುಕ್ಲಾ ಎಂಬ ಭಕ್ತರು ಕರೆ ಮಾಡಿ. ತಪ್ಪಾಗಿ ನಿಮ್ಮ ಖಾತೆಗೆ ಹಣ ವರ್ಗಾವಣೆಗೊಂಡಿರುವುದಾಗಿ ತಿಳಿಸಿದ್ದರು. ಈ ವೇಳೆಗಾಗಲೇ ಬ್ಯಾಂಕ್ ಕಾರ್ಯನಿರ್ವಹಣೆ ಅವಧಿ ಮುಗಿದಿದ್ದು, 24 ಗಂಟೆಯೊಳಗೆ ನಿಮ್ಮ ಹಣ ಹಿಂದಿರುಗಿಸುವುದಾಗಿ ಅರ್ಚಕರು ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ (ಇಂದು) ಆಗಸ್ಟ್ 27ರಂದು ಬೆಳಗ್ಗೆ ಅರ್ಚಕ ಮಿಶ್ರಾ, ಹತ್ತಿರದ ಎಚ್ಡಿಎಫ್ಸಿ ಬ್ಯಾಂಕ್ ಬ್ರಾಂಚ್ಗೆ ಭೇಟಿ ನೀಡಿದ್ದು, ಚೆಕ್ ರೂಪದಲ್ಲಿ ಅಷ್ಟು ಹಣವನ್ನು ಎಲ್ಲಿಂದ ಬಂದಿತ್ತೋ ಅದೇ ಖಾತೆಗೆ ಹಣ ಹಿಂದಿರುಗಿಸಿದ್ದಾರೆ.
Post a comment
Log in to write reviews