ರೈಲಿನಲ್ಲಿ ಪ್ರಯಾಣಿಸುವಾಗ ಗರ್ಭಿಣಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ವೈದ್ಯಕೀಯ ತಂಡ ರೈಲ್ವೆ ನಿಲ್ದಾಣದಲ್ಲಿ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
ರೈಲಿನಲ್ಲಿ ಪ್ರಯಾಣಿಸುವಾಗ ಗರ್ಭಿಣಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು, ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ವೈದ್ಯಕೀಯ ತಂಡ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಈ ಘಟನೆ ಬಿಹಾರದಲ್ಲಿ ನಡೆದಿದ್ದು.
ದಿಬ್ರುಗಢ-ಚಂಡೀಗಢ 15903 ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರು ರೈಲಿನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಾಹಿತಿಗಳ ಪ್ರಕಾರ ಗರ್ಭಿಣಿ ರಹನಿ ದೇವಿ ಮತ್ತು ಆಕೆಯ ಪತಿ ಬರೌನಿಯಿಂದ ಮುಜಾಫರ್ ನಗರಕ್ಕೆ ದಿಬ್ರುಗಢ-ಚಂಡೀಗಢ ಎಕ್ಸ್ಪ್ರೆಸ್ ರೈಲಿನಲ್ಲಿ ಹೊರಟಿದ್ದರು. ಕೆಲ ಹೊತ್ತಿನ ಬಳಿಕ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯ ಪತಿ ಟಿಟಿಇ ಮತ್ತು ಆರ್.ಫಿ.ಎಫ್ಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಇಲಾಖೆಯಿಂದ ಮಾಹಿತಿ ಲಭಿಸಿದ ತಕ್ಷಣ ವಿಭಾಗೀಯ ರೈಲ್ವೆ ಆಸ್ಪತ್ರೆಯ ವೈದ್ಯೆ ಡಾ. ಪಾಯಲ್ ಮಿಶ್ರಾ ನೇತೃತ್ವದ ವೈದ್ಯಕೀಯ ತಂಡ ಸಮಸ್ತಿಪುರದ ಠಾಣೆಗೆ ಆಗಮಿಸಿ ಗರ್ಭಿಣಿ ಮಹಿಳೆಗೆ ರೈಲಿನಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಸುರಕ್ಷಿತ ಹೆರಿಗೆಯ ನಂತರ ಬಾಣಂತಿ ಮಹಿಳೆಯನ್ನು ಸೂಕ್ತ ಸಮಾಲೋಚನೆ ನಡೆಸಿ ಔಷಧಿಗಳನ್ನು ನೀಡಿ ಮುಜಾಫರ್ ನಗರಕ್ಕೆ ಕಳುಹಿಸಲಾಗಿದೆ. ಡೆಲಿವರಿ ಆಗುವವರೆಗೂ ರೈಲು ಸುಮಾರು 45 ನಿಮಿಷಗಳ ಕಾಲ ಸಮಸ್ತಿಪುರ ನಿಲ್ದಾಣದಲ್ಲಿಯೇ ನಿಂತಿತ್ತು.
Post a comment
Log in to write reviews