Samayanews.

Samayanews.

2024-12-24 12:38:20

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸಾಕು ಬೆಕ್ಕಿಗೆ ತಾಯಿಯೇ ಬಲಿ. ಮಗನ ಅಳಲು

ಶಿವಮೊಗ್ಗ, ಆ.09: ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ ದಾರುಣ ಘಟನೆಯು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ನಡೆದಿದೆ.

ಗಂಗೀಬಾಯಿ(50) ಮೃತ ಮಹಿಳೆ ಎಂದು ತಿಳಿದು ಬಂದಿದೆ. ಇನ್ನು ಈ ಕುರಿತು ಮಾತನಾಡಿದ ಮೃತರ ಮಗ ಕಿರಣ್,​ ಮನೆಯಲ್ಲಿ ಬೆಕ್ಕು ಸಾಕಿದ್ದೇವು. ಅದು ಎರಡು ತಿಂಗಳ ಹಿಂದೆ ನಮ್ಮ ಅಮ್ಮನಿಗೆ ಕಚ್ಚಿತ್ತು. ಇದಾದ ಬಳಿಕ ಮೂರ್ನಾಲ್ಕು ದಿವಸ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮಳೆಯಲ್ಲಿ ಒದ್ದೆಯಾಗಿದ್ದಕ್ಕೆ , ಬೆಕ್ಕು ಕಚ್ಚಿದ ಜಾಗ ಸೆಪ್ಟಿಕ್​ ಆಗಿತ್ತು. ಇದಾದ ನಂತರ ನಮ್ಮ ಅಮ್ಮ ಕಾಲು ಸೆಳೆಯುತ್ತದೆ ಎಂದು ಹೇಳಿದ್ದರು. ಹೀಗಾಗಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದೇವು. ಅವರು ಐದು ಇಂಜೆಕ್ಷನ್​ ಹಾಕಲು ಹೇಳಿದ್ದರು. ಅದರಂತೆ ಒಂದು ಇಂಜೆಕ್ಷನ್​ ಹಾಕಲಾಗಿತ್ತು. ಇದಾದ ಬಳಿಕ ಆರೋಗ್ಯದಲ್ಲಿ ಚೇತರಿಕೆ ಆದ ಹಿನ್ನಲೆ ಉಳಿದ ನಾಲ್ಕು ಇಂಜೆಕ್ಷನ್​ ಹಾಕಿಸಲಿಲ್ಲ. ನಿನ್ನೆ(ಆ.08) ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಿದ್ದಕ್ಕೆ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೂ. ಆದರೆ ಚಿಕಿತ್ಸೆ ಫಲಿಸಿದೇ ಕೊನೆಯುಸಿರೆಳೆದಿದ್ದಾರೆ ಎಂದು ಮಗ ಅಳಲು ತೋಡಿಕೊಂಡರು.

img
Author

Post a comment

No Reviews