ಪ್ರಸ್ತುತ ಕಾಲಘಟ್ಟದಲ್ಲಿ ಸೋಷಿಯಲ್ ಮೀಡಿಯಾವನ್ನೇ ಜೀವನದ ಭಾಗವಾಗಿಸಿಕೊಂಡವರು ಅನೇಕರಿದ್ದಾರೆ. ಹೀಗಾಗಿ ಲೈಕ್ಸ್, ಫಾಲೋವರ್ಸ್ ಗಿಟ್ಟಿಸಿಕೊಳ್ಳಲು, ಫೇಮಸ್ ಆಗುವ ಸಲುವಾಗಿ ತಮ್ಮ ಜೀವನ ಪ್ರತಿಯೊಂದು ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಫೇಮಸ್ ಆಗಬೇಕು ಎನ್ನುವ ಕಾರಣಕ್ಕೆ ತೀರಾ ಖಾಸಗಿ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವುದು ಹೊಸದೇನಲ್ಲ. ಇದೀಗ ಹೊಸದಾಗಿ ಮದುವೆಯಾದ ಜೋಡಿಯೂ ಫಸ್ಟ್ ನೈಟ್ ತಮ್ಮ ಫಸ್ಟ್ ನೈಟ್ ವಿಡಿಯೋವನ್ನು ಹಂಚಿಕೊಂಡಿದೆ.
ಮೊದಲ ರಾತ್ರಿಯು ಹೊಸದಾಗಿ ಮದುವೆಯಾದ ದಂಪತಿಗೆ ಮಧುರ ಕ್ಷಣವಾಗಿದ್ದು ತಮ್ಮ ಖಾಸಗಿತನದ ವಿಡಿಯೋವನ್ನು ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಆದರೆ ನವಜೋಡಿಯ ಫಸ್ಟ್ ನೈಟ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋವನ್ನು Hasna ZarooriHai ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದು ಮದುವೆಯ ರಾತ್ರಿ ಮಲಗುವ ಕೋಣೆಯ ವಿಡಿಯೋ ಇದಾಗಿದೆ.
ಇದರಲ್ಲಿ ಇಬ್ಬರೂ ತಮ್ಮ ಮದುವೆಯ ಬಟ್ಟೆಗಳನ್ನು ಬಿಚ್ಚುವ ದೃಶ್ಯ ಸೆರೆಯಾಗಿದೆ. ಹೌದು, ವರನು ನವ ವಧುವಿನ ಆಭರಣ ತೆಗೆಯಲು ಸಹಾಯ ಮಾಡುತ್ತಾನೆ. ವಧುವು ರೊಮ್ಯಾಂಟಿಕ್ ಮೂಡ್‌ನಲ್ಲಿ ವರನನ್ನು ಚುಂಬಿಸುತ್ತಾಳೆ. ವಧು ಮತ್ತು ವರರು ಪರಸ್ಪರ ಚುಂಬಿಸಿದ್ದು, ಈ ವಿಡಿಯೋವು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಹೊಸದಾಗಿ ಮದುವೆಯಾದ ಈ ಜೋಡಿಗಳು ತಮ್ಮ ಮದುವೆಯ ರಾತ್ರಿಯ ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಅದನ್ನು Instagram ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವೊಂದು ಇಪ್ಪತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ನೆಟ್ಟಿಗರೊಬ್ಬರು, ‘ಈ ನವಜೋಡಿಯು ನೈತಿಕತೆಯ ಗಡಿಯನ್ನು ಮೀರಿದ್ದಾರೆ ‘ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಇತ್ತೀಚಿಗೆ ಜನರು ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ‘ಇದೇನಾ ನಮ್ಮ ಸಂಸ್ಕೃತಿ’ ಎಂದು ಬರೆದುಕೊಂಡಿದ್ದಾರೆ. ಹೀಗೆ ನೆಟ್ಟಿಗರು ಈ ನವಜೋಡಿಯೂ ಖಾಸಗಿ ವಿಡಿಯೋ ಹಂಚಿಕೊಂಡದ್ದಕ್ಕೆ ಟೀಕಿಸಿದ್ದಾರೆ.
Post a comment
Log in to write reviews