ಬೆಂಗಳೂರು: ರಾಜ್ಯದಲ್ಲಿ ಇದೀಗ ಕಾಳುಮೆಣಸಿನ ದರ ಏರಿಕೆಯ ಹಾದಿಯಲ್ಲಿದ್ದು, ಬೆಳೆಗಾರರು ಭಾರಿ ನಿರೀಕ್ಷೆಯಲ್ಲಿದ್ದಾರೆ. ಹವಾಮಾನದ ಕಾರಣ ರೊಬಸ್ಟಾ ಕಾಫಿ ಹಾಗೂ ಕಾಳುಮೆಣಸಿನ ಇಳುವರಿ ಕಡಿಮೆ ಆಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಬೆಲೆ ಏರುತ್ತಿದೆ ಎನ್ನಲಾಗಿದೆ. ಇತ್ತೀಚಿಗೆ 1 ಕೆ.ಜಿ. ಕಾಳುಮೆಣಸು ರೂ. 650 ಕ್ಕೆ ಮಾರಾಟ ಆಗಿದ್ದು, ಕಳೆದ 6 ವರ್ಷಗಳಲ್ಲಿ ಇದು ಗರಿಷ್ಠ ಬೆಲೆ ಆಗಿದೆ. ಆದರೆ, 2018 ರಲ್ಲಿ ಕೆ.ಜಿ ಮೆಣಸಿನ ಬೆಲೆ ರೂ. 780 ಗೆ ತಲುಪಿತ್ತು. ಹೀಗಾಗಿ ಬೆಳೆಗಾರರು 2018 ರಲ್ಲಿದ್ದ ಬೆಲೆಗೆ ತಲುಪಬಹುದು ಎಂಬ ಕಾತುರದಲ್ಲಿದ್ದಾರೆ.
Post a comment
Log in to write reviews