ಏರುತ್ತಿರುವ ಬಿಸಿಲಿನ ತಾಪ ಹಾಗೂ ನೀರಿನ ಸಮಸ್ಯೆಯಿಂದಾಗಿ ತರಕಾರಿ ಪೂರೈಕೆಯಲ್ಲಿ ತೀವ್ರ ಕುಸಿತ ಉಂಟಾಗಿದೆ.
ಈ ಕಾರಣಕ್ಕೆ ಎಲ್ಲ ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಗ್ರಾಹಕರನ್ನು ಹೌಹಾರುವಂತೆ ಮಾಡುತ್ತಿದೆ. ಏರುತ್ತಲೇ ಇರುವ ತರಕಾರಿ ಬೆಲೆ ಜನರ ನಿತ್ಯ ಜೀವನದಲ್ಲಿ ತಳಮಳಕ್ಕೆ ಕಾರಣವಾಗಿದೆ.
ಮಳೆ ಪ್ರಾರಂಭವಾಗುವ ತನಕ ಈ ಬೆಲೆ ಇಳಿಕೆ ಕಾಣುವುದಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈಗಾಗಲೇ ಒಂದು ಕೆಜಿ ತರಕಾರಿ ಕೊಳ್ಳುವಲ್ಲಿ ಅರ್ಧ ಕೆಜಿ ಖರೀದಿ ಮಾಡುವ ಸ್ಥಿತಿಗೆ ಗ್ರಾಹಕರು ಬಂದಿದ್ದಾರೆ.
ಬಿರುಬಿಸಿಲು, ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾವಿ ಬತ್ತಿರುವುದು ತರಕಾರಿ ಬೆಳೆಗಳ ಇಳುವರಿ ತಗ್ಗಿಸಿದೆ.
ಇದರಿಂದ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ರಾಜ್ಯ ರಾಜಧಾನಿ ಬೆಂಗಳೂರಿಗೆ ವಿವಿಧೆಡೆಯಿಂದ ಪೂರೈಕೆ ಆಗುವ ತರಕಾರಿ ಪ್ರಸ್ತುತ ಗಣನೀಯವಾಗಿ ಇಳಿಮುಖವಾಗಿದೆ.
ಬೆಲೆ ಹೆಚ್ಚಳದಿಂದ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ. ತಂದ ತರಕಾರಿಗಳು ಒಣಗಿ ಹೋಗುತ್ತವೆ. ಚಿಲ್ಲರೆ ವ್ಯಾಪಾರಿಗಳು ಸಗಟು ಮಾರುಕಟ್ಟೆಯಿಂದ ತರಕಾರಿ ತಂದು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಎಂದು ಕಲಾಸಿಪಾಳ್ಯ ಮಾರುಕಟ್ಟೆಯ ವರ್ತಕ ಸುರೇಶ್ ಹೇಳಿದ್ದಾರೆ.
ತರಕಾರಿ ದರ ಪಟ್ಟಿ ನೋಡುವುದಾದರೆ ಪ್ರತಿ ಕೆಜಿಗೆ
ನಾಟಿ ಬೀನ್ಸ್ - 180 ರೂ.
ಬೀನ್ಸ್ - 140 ರೂ.
ಈರುಳ್ಳಿ - 40 ರೂ.
ಬೀಟ್‌ರೂಟ್ - 80 ರೂ.
ಬೆಂಡೆಕಾಯಿ - 80 ರೂ.
ನವಿಲುಕೋಸು - 80 ರೂ.
ಹೀರೆಕಾಯಿ - 80 ರೂ.
ಟೊಮೇಟೊ - 40 ರೂ.
ಆಲೂಗಡ್ಡೆ - 50 ರೂ.
ಮೆಣಸಿನಕಾಯಿ - 90 ರೂ.
ಕ್ಯಾಪ್ಸಿಕಂ - 80 ರೂ.
Tags:
- high rates of vegetables
- vegetables
- fruits and vegetables
- vegetables rates
- sabzi mandi rate list today
- vegetable name
- high cost vegetables in 2022
- dadar vegetables price high
- high cost vegetables in india
- high cost vegetables in world
- high cost vegetables in the world
- what causes high pulse rate
- vegetable prices
- high pulse rate
- high pulse rate causes
- dangers of high pulse rate
- vegetable price
- high pulse rate on keto
- karachi sabzi mandi rate
Post a comment
Log in to write reviews