ರಾಜ್ಯದ ಬಹುತೇಕ ಶೇಕಡ 99 ರಷ್ಟು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಮಹಾನ್ ಘಟಾನುಘಟಿ ನಾಯಕರುಗಳು ಈ ಬಾರಿ ಮುಗ್ಗರಿಸಿ ಬಿದ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ,ಬೀದರ್,ಹಾಸನದ ಸೇರಿದಂತೆ ಹಲವು ಹಾಲಿ ಸಂಸದರಿಗೆ ಭಾರಿ ಮುಖಭಂಗವಾಗಿದೆ.
ಡಾ ಮಂಜುನಾಥ್ ಮತ್ತು ಡಿ ಕೆ ಸುರೇಶ್ ಸ್ಪರ್ಧೆಯಿಂದಾಗಿ ಬೆಂಗಳೂರು ಗ್ರಾಮಾಂತರ ಈ ಬಾರಿ ಭಾರೀ ಸಂಚಲನ ಮೂಡಿಸಿತ್ತು. ಸತತವಾಗಿ ಮೂರು ಬಾರಿ ಜಯಭೇರಿ ಸಾಧಿಸಿದ್ದ ಡಿ ಕೆ ಸುರೇಶ್ ಈ ಬಾರಿ ಸೋಲಿನ ಕಹಿ ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿ ಜನರ ಹೃದಯ ಸಿಂಹಾಸನ ಅಲಂಕರಿಸುವ ಮೂಲಕ ಕಾಂಗ್ರೆಸ್ ನ ಹೃದಯವನ್ನ ಛಿದ್ರಗೊಳಿಸಿದ್ದಾರೆ.
ಬಿಜೆಪಿಯ ಭರವಸೆಯ ಜಿಲ್ಲೆ ಬೀದರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾಗೆ ಸೋಲಾಗಿದ್ದು ಮೊದಲ ಭಾರಿಗೆ ಕಣಕಿಳಿದ್ದ ಸಾಗರ್ ಖಂಡ್ರೆ ಜಯಶೀಲರಾಗಿದ್ದಾರೆ. ದಳಪತಿಗಳ ಭದ್ರಕೋಟೆಯಲ್ಲಿ ಪ್ರಜ್ವಲ್ ರೇವಣ್ಣ ರನ್ನ ಸೋಲಿಸುವ ಮೂಲಕ ಕೈ ಅಭ್ಯರ್ಥಿ ಶ್ರೇಯಸ್ ಪಾಟೇಲ್ ತೆನೆಯನ್ನ ಕೆಳಗಿಸಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಡಾ.ಉಮೇಶ ಜಾದವ್ ಸ್ಪರ್ಧಿಸಿದ್ದರು. ಹಾಲಿ ಸಂಸದನ ವಿರುದ್ಧ ಕಾಂಗ್ರೆಸ್‌ನ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲುವು ಸಾಧಿಸಿದ್ದಾರೆ.
ಚಿಕ್ಕೋಡಿಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಕಾಂಗ್ರೆಸ್‌ನಿಂದ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸಿದ್ದು ಮೊದಲ ಬಾರಿಯೇ ಪ್ರಿಯಾಂಕ ಭರ್ಜರಿ ಗೆಲುವು ಸಾಧಿಸಿದ್ದಾರೆ.. ರಾಯಚೂರು ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿವಿ ನಾಯಕ್ ಅವರಿಗೆ ಈ ಭಾರಿ ಟಿಕೆಟ್ ಕೈತಪ್ಪಿತ್ತು. ಅವರ ಬದಲಾಗಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಗೆ ಬಿಜೆಪಿ ಟಿಕೆಟ್ ನೀಡಲಾಗಿದ್ದು, ಇತ್ತ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿ ಸಿಗದ ಕಾರಣ ನಿವೃತ್ತ ಐಎಎಸ್ ಅಧಿಕಾರಿ ಜಿ ಕುಮಾರ್ ನಾಯ್ಕ್ ಅವರನ್ನು ಚುನಾವಣಾ ಕಣಕ್ಕೆ ಇಳಿಸಿತ್ತು. ಅದೃಷ್ಟವಶಾತ್ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರನ್ನು ಸೋಲಿಸಿ ಜಿ ಕುಮಾರ್ ನಾಯ್ಕ್ ಗೆದ್ದು ಬೀಗಿದ್ದಾರೆ.
Post a comment
Log in to write reviews