ವಿಡಿಯೋ ಮಾಡಿದ್ದ ಪ್ರಜ್ವಲ್‌ನ ಮೊಬೈಲ್ ಕಳ್ಳತನ ? ಪ್ರಮುಖ ಆಧಾರವೇ ನಾಪತ್ತೆ !
ಬೆಂಗಳೂರು: ಪೆನ್ಡ್ರೈವ್ ಕೇಸಿನಲ್ಲಿ ಪ್ರಮುಖ ಸಾಕ್ಷಿಯಾಗಬೇಕಿದ್ದ ಪ್ರಜ್ವಲ್‌ನ ದುಬಾರಿ ಮೊಬೈಲ್ ವರ್ಷದ ಹಿಂದೆಯೇ ಕಳ್ಳತನವಾಗಿದೆ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಸದ ಪ್ರಜ್ವಲ್ ರೇವಣ್ಣ ದುಬಾರಿ ಮೊಬೈಲ್ ಬಳಸುತ್ತಿದ್ದಲ್ಲದೆ, ಒಂದು ಆ್ಯಪಲ್ ಹಾಗೂ ಸ್ಯಾಮ್ ಸಂಗ್ ಕಂಪನಿ ಹೊಸ ಮಾಡೆಲ್‌ನ ಮೊಬೈಲ್‌ಗಳನ್ನು ಬಳಸುತ್ತಿದ್ದ. ಇದು ಅವರ ಆಪ್ತರಿಗೂ ತಿಳಿದಿತ್ತು. ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ ಎನ್ನಲಾದ ಆ ಮೊಬೈಲ್ ಕಳೆದು ಹೋಗಿರುವ ಬಗ್ಗೆ ಕಳೆದ ವರ್ಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ಹೊರ ಬರಲು ಮೂಲ ಕಾರಣ ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಈತನ ಮೂಲಕವೇ ಮೊದಲು ವಿಡಿಯೋ ಹಾಗೂ ಇನ್ನಿತರ ವಿಚಾರಗಳು ಹೊರಬಿದ್ದಿದೆ. ಇದೂ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆಸ್ತಿ ಗಲಾಟೆ ಸಂಬಂಧ ಕಾರು ಚಾಲಕನೂ ಕೂಡ ಈ ಹಿಂದೆ ದೂರು ದಾಖಲಾಗಿದ್ದಲ್ಲದೆ ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ. ಕೆಲಸಕ್ಕೆ ಇದ್ದ ದಿನಗಳಲ್ಲಿ ಕಾರು ಚಾಲಕ ಮೊಬೈಲ್ ಎತ್ತಿಕೊಂಡಿದ್ದಲ್ಲದೆ, ಅದರಲ್ಲಿದ್ದ ಡಾಟಾವನ್ನು ತಮ್ಮ ಮೊಬೈಲ್ಗೆ ವರ್ಗಾಯಿಸಿಕೊಂಡಿದ್ದ ಎನ್ನಲಾಗಿದೆ. ಇದರಲ್ಲಿ ಸಂತ್ರಸ್ತೆಯರ ವಿಡಿಯೋ ಕೂಡ ಇತ್ತು. ಹೀಗಾಗಿ ಸಂಸದನಾಗಿದ್ದ ಪ್ರಜ್ವಲ್ ಈ ಪ್ರಕರಣ ಹೊರಬಾರದಿರಲೆಂದು ಮೊಬೈಲ್ ಕಳ್ಳತನದ ಬಗ್ಗೆ ಹೊಳೆನರಸೀಪುರ ಠಾಣೆಯಲ್ಲಿ ಕಳೆದ ವರ್ಷ ದೂರು ನೀಡಿರುವುದಾಗಿ ಪ್ರಜ್ವಲ್ ಎಸ್ಐಟಿ ಅಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಅಲ್ಲಿಗೆ ಪ್ರಕರಣದಲ್ಲಿ ಸಂತ್ರಸ್ತೆಯರಿದ್ದರೂ, ತನಿಖೆಯ ಜಾಡಿನಲ್ಲಿ ಪ್ರಮುಖ ಸಾಕ್ಷಿ ಹಾಗೂ ಆಧಾರವಾಗಿ ನಿಲ್ಲುವುದು ಮೊಬೈಲ್. ಅದೇ ಕಳೆದು ಹೋಗಿದೆ ಎಂದ ಮೇಲೆ, ಅದಲ್ಲಿರುವ ಡಾಟಾವಾಗಲಿ ಇನ್ನಿತರ ದಾಖಲೆಯಾಗಲಿ ಪಡೆಯುವುದು, ಮರು ವಶ ( ರಿಟ್ರೀವ್) ಮಾಡುವುದು ಅಸಾಧ್ಯ. ಇವೆಲ್ಲವನ್ನೂ ಮನಗಂಡೇ ಈ ಪ್ರಕರಣ ಹೊರಗೆ ಬರುವುದಿಲ್ಲ ಎಂದು ಪ್ರಜ್ವಲ್ ಆಟ ಮುಂದುವರೆದಿತ್ತು ಎನ್ನಲಾಗಿದೆ. ಈಗ ಎಸ್ಐಟಿ ಕಸ್ಟಡಿಯಲ್ಲಿ ಅಧಿಕಾರಿಗಳ ಪ್ರಶ್ನೆಗೆ ಮೊಬೈಲ್ ಕಳೆದುಕೊಂಡು ವರ್ಷವಾಗಿದೆ ಎಂಬ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಕಸ್ಟಡಿಯಲ್ಲಿರುವ ಪ್ರಜ್ವಲ್ ನನ್ನು ಎಸ್ಐಟಿ ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರಶ್ನೆಗಳಿಗೆ ಪ್ರಜ್ವಲ್ ಒಂದಷ್ಟು ಉತ್ತರ ನೀಡಿದ್ದಾನೆ. ಸಂತ್ರಸ್ಥೆಯರ ಸ್ವ ಇಚ್ಛಾ ಹೇಳಿಕೆ ಬಗ್ಗೆ ಪ್ರಜ್ವಲ್ ನನ್ನು ಪ್ರಶ್ನಿಸಿದಾಗ ಸಹಕಾರ ನೀಡಿಲ್ಲ ಎಂಬ ಮಾಹಿತಿ ದೊರೆತಿದೆ. ವಿಡಿಯೋದಲ್ಲಿರೋದು ನಾನಲ್ಲ, ಅವರೆಲ್ಲ ನನಗೆ ಪರಿಚಯವಿದ್ದಾರೆ. ಜೊತೆಗೆ ಆತ್ಮೀಯರಿದ್ದರು. ಆದರೆ, ನಾನು ಅತ್ಯಾಚಾರ ಮಾಡಿಲ್ಲ. ಅತ್ಯಾಚಾರ ಆರೋಪಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಯಾವುದೇ ವಿಡಿಯೋ ರೆಕಾರ್ಡ್ ಮಾಡಿಲ್ಲ. ನನ್ನ ವಿಡಿಯೋಗಳ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲವೂ ಚಾಲಕ ಕಾರ್ತಿಕ್ ಕಳಿಸಿದ್ದು, ಅಷ್ಟಕ್ಕೂ ನನ್ನ ಮೊಬೈಲ್ ಕಳೆದು ಹೋಗಿ ವರ್ಷ ಆಗಿದೆ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಹೀಗಿದ್ದರೂ ದಾಖಲೆ ಮುಂದಿಟ್ಟು ಮತ್ತಷ್ಟು ವಿಚಾರಣೆಗೆ ಎಸ್ಐಟಿ ತಯಾರಿ ನಡೆಸಿದೆ.
Post a comment
Log in to write reviews