ಈ ಬಾರಿಯ ಲೋಕಸಭಾ ಕದನ ಹಲವು ಘಟಾನುಘಟಿ ನಾಯಕರುಗಳಿಗೆ ಪ್ರತಿಷ್ಠೆಯ ಕಣವಾಗಿತ್ತು.. ಆದ್ರೆ ಈ ಚುನಾವಣೆಯಲ್ಲಿ ಪಕ್ಕಾ ಗೆಲ್ಲುತ್ತಾರೆ ಅಂತ ನಿರೀಕ್ಷೆ ಇಟ್ಟುಕೊಂಡಿದ್ದ ನಾಯಕರುಗಳು ಮಕಾಡೆ ಮಲಗಿದ್ದಾರೆ.. ಮತದಾರನ ತೀರ್ಪಿಗೆ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ.. ಹಾಗಾದ್ರೆ ಈ ಬಾರಿಯ ಲೋಕ ಸಮರದಲ್ಲಿ ಯಾವ್ಯಾವ ಘಟಾನುಘಟಿ ನಾಯಕರುಗಳಿಗೆ ಇದು ಪ್ರತಿಷ್ಠೆಯ ಕಣವಾಗಿತ್ತು.. ಹಾಗೂ ಎಷ್ಟು ಅಂತರದಿಂದ ಸೋಲೊಪ್ಪಿಕೊಂಡ್ರು ಅನ್ನೋದನ್ನ ನೋಡೋಣ..
ಪ್ರಜ್ವಲ್ ರೇವಣ್ಣ:
ಪೆನ್ ಡ್ರೈವ್ ಪ್ರಕರಣದ ಮೂಲಕ ದೇಶವ್ಯಾಪಿ ಸುದ್ದಿಯಾಗಿದ್ದ ಜೆಡಿಎಸ್‌ನ ಉಚ್ಛಾಟಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೀನಾಯ ಸೋಲು ಕಂಡಿದ್ದಾರೆ.. ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಪ್ರಜ್ವಲ್ ರೇವಣ್ಣ ರಿಸಲ್ಟ್ ಮೇಲೆ ಎಲ್ಲರೂ ಚಿತ್ತ ನೆಟ್ಟಿದ್ದರು.. ಆದ್ರೆ ಹಾಸನದ ಮತದಾರರು ಈ ಬಾರಿ ಕಾಂಗ್ರೆಸ್‌ನ ಶ್ರೇಯಸ್ ಪಟೇಲ್ ಗೆ ಜೈಕಾರ ಹಾಕಿದ್ದಾರೆ.
ಡಿಕೆ ಸುರೇಶ್:
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ತನ್ನ ಪಾರುಪತ್ಯ ಸಾಧಿಸುವಲ್ಲಿ ಯಶ್ವಸಿಯಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ತಾನೇ ಗೆದ್ದು ಬೀಗುತ್ತೇನೆ ಅಂತ ಆತ್ಮವಿಶ್ವಾಸದಲ್ಲಿದ್ದ ಡಿಕೆ ಸುರೇಶ್ ಹೀನಾಯ ಸೋಲು ಅನುಭವಿಸಿದ್ದಾರೆ.. ಡಿಕೆ ಸುರೇಶ್ ವಿರುದ್ಧ ಸ್ಪರ್ಧೆಗೆ ಇಳಿದಿದ್ದ ಬಿಜೆಪಿಯ ಡಾ.ಮಂಜುನಾಥ್ ಗೆಲುವು ದಾಖಲಿಸಿದ್ದಾರೆ.. ಈ ಮೂಲಕ ಡಿಕೆ ಬ್ರದರ್ಸ್‌ನ ಹುಟ್ಟಡಗಿಸಿದ್ದಾರೆ..
ಅಣ್ಣಾಮಲೈ:
ತಮಿಳುನಾಡು ಬಿಜೆಪಿಯ ಫೈಯರ್ ಬ್ರ್ಯಾಂಡ್ ಅಂತನೇ ಬಿಂಬಿತವಾಗಿದ್ದ ಅಣ್ಣಾಮಲೈ ಹೀನಾಯ ಸೋಲು ಕಂಡಿದ್ದಾರೆ.. ಕೊಯಂಬತ್ತೂರಿನಿಂದ ಸರ್ಧೆ ಮಾಡಿದ್ದ ಅಣ್ಣಮಲೈ, ಡಿಎಂಕೆ ಪಕ್ಷದ ಗಣಪತಿ ರಾಜ್‌ಕುಮಾರ್ ವಿರುದ್ಧ ಪರಾಭವಗೊಂಡಿದ್ದಾರೆ.. ಅಲ್ಲದೇ ತಮಿಳುನಾಡನಲ್ಲಿ ಬಿಜೆಪಿ ಗೆಲ್ಲಿಸಲು ಅತಿ ಹೆಚ್ಚು ರ್ಯಾಲಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಕೊನೆಗೂ ವಿಫಲವಾಗಿದ್ದಾರೆ.. ಯಾಕಂದ್ರೆ ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆಲ್ಲುವಲ್ಲಿ ವಿಫಲವಾಗಿದೆ..
ಸ್ಮೃತಿ ಇರಾನಿ:
ಈ ಬಾರಿಯ ಚುನಾವಣೆಯಲ್ಲಿ ಲೇಡಿ ಸ್ಟಾರ್‌ಗಳ ಪೈಕಿ ಪ್ರಮುಖ ಹೆಸ್ರು ಅಂದ್ರೆ ಅದು ಸ್ಮೃತಿ ಇರಾನಿ.. ಉತ್ತರಪ್ರದೇಶದ ಅಮೇಥಿಯಿಂದ ಸ್ಪರ್ಧೆ ಮಾಡಿದ್ದ ಸ್ಮೃತಿ ಇರಾನಿ ಹೀನಾಯ ಸೋಲು ಅನುಭವಿಸಿದ್ದಾರೆ.. ಸ್ಮೃತಿ ಇರಾನಿ ಗೆಲ್ತಾರೆ ಅನ್ನೋ ಆತ್ಮವಿಶ್ವಾಸ ಇತ್ತು ಆದ್ರೆ ಇವರ ಲೆಕ್ಕಾಚಾರ ಎಲ್ಲ ಉಲ್ಟಾ ಆಗಿದೆ.. ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಭರ್ಜರಿ ಗೆಲುವು ದಾಖಲಿಸಿ ಲೇಡಿ ಸ್ಟಾರ್‌ಗೆ ಠಕ್ಕರ್ ನೀಡಿದ್ದಾರೆ..
ಮನೇಕಾ ಗಾಂಧಿ:
ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಮತ್ತೊಂದು ಲೇಡಿ ಸ್ಟಾರ್ ಅಂದ್ರೆ ಅದು ಮನೇಕಾ ಗಾಂಧಿ.. ಉತ್ತರ ಪ್ರದೇಶದ ಸುಲ್ತಾನ್‌ಪುರ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮನೇಕಾ ಗಾಂಧಿ, ಸಮಾಜವಾದಿ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದಾರೆ..
ರಾಜೀವ್ ಚಂದ್ರಶೇಖರ್:
ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಈ ಬಾರಿಯ ಚುನಾವಣೆಯಲ್ಲಿ ಮುಗ್ಗರಿಸಿದ್ದಾರೆ.. ಕೇರಳದ ತಿರುವನಂತಪುರಂನಿಂದ ಸ್ಪರ್ಧೆ ಮಾಡಿದ್ದ ರಾಜೀವ್ ಚಂದ್ರಶೇಖರ್ ಪರಾಭವಗೊಂಡಿದ್ದಾರೆ.. ಅಚ್ಚರಿ ಅಂದ್ರೆ ಕಾಂಗ್ರೆಸ್‌ನ ಶಶಿ ತರೂರ್‌ಗೆ ಮತದಾರ ಜೈ ಅಂದಿದ್ದಾನೆ..
ಒಟ್ಟಿನಲ್ಲಿ ಈ ಬಾರಿ ಚುನಾವಣೆಯಲ್ಲಿ ಸ್ಟಾರ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಅಂತ ಭಾವಿಸಲಾಗಿತ್ತು.. ಆದರೆ ಮತದಾರರು ಸ್ಟಾರ್ ಅಭ್ಯರ್ಥಿಗಳಿಗೆ ಮಣೆ ಹಾಕದೇ ಇದಿದ್ದು ಕೊಂಚ ಅಚ್ಚರಿಗೆ ಕಾರಣವಾಗಿದೆ..
Post a comment
Log in to write reviews